By signing in you confirm you are 18 or older, or have your parent’s or guardian’s consent.

CTET 8 Feb 2026 Paper 1 Kannada Language Question Paper with Answer Key

Passage

ನಿರ್ದೇಶನ : ಈ ಕೆಳಗಿನ ಲೇಖನ ಭಾಗವನ್ನು ಓದಿ, ಅನುಸರಿಸಿ ಬರುವ ಪ್ರಶ್ನೆಗಳಿಗೆ (ಪ್ರಶ್ನೆ ಸಂಖ್ಯೆ : 91-99) ಸೂಕ್ತ ಉತ್ತರವನ್ನು ಆರಿಸುವುದರ ಮೂಲಕ ಉತ್ತರಿಸಿ.
ಮುಮ್ಮಡಿ ಕೃಷ್ಣರಾಜ ಒಡೆಯರ ಚರಿತ್ರೆಯೊಂದಿಗೆ ಗಾಢವಾಗಿ ತಳುಕು ಹಾಕಿಕೊಂಡ ಹೆಸರು ‘ಬಕ್ಷಿ ತಿಪ್ಪಯ್ಯ’ನವರದು. ಒಡೆಯರು ಶಿಶುವಾಗಿದ್ದಾಗ ಅವರನ್ನು ಸಂರಕ್ಷಿಸಿದ್ದು, ಬೆಳೆಸಿದ್ದು, ಅವರು ಸಿಂಹಾಸನಾಧೀಶರಾದಾಗ ಬೆನ್ನೆಲುಬಾಗಿ ನಿಂತದ್ದು ತಿಪ್ಪಯ್ಯನವರ ವಂಶ ಚರಿತ್ರೆಯಲ್ಲಿ ಮುಖ್ಯವಾಗಿ ಕಾಣುವ ಸಂಗತಿ. ಅಂಥ ಐತಿಹಾಸಿಕ ವಂಶದಲ್ಲಿ ಬಂದವರು ಎಸ್.ಆರ್. ವೆಂಕಟರಾಮಯ್ಯನವರು.
ಸಂಕೇತಿ ಸಮುದಾಯವು ನಗರವಾಸಕ್ಕೆ ತೊಡಗಿಕೊಂಡದ್ದು ಮತ್ತು ಆಧುನಿಕ ವಿದ್ಯಾಭ್ಯಾಸಕ್ಕೆ ತೆರೆದುಕೊಂಡದ್ದು ಬಹಳ ನಿಧಾನವಾಗಿ. ಆದರೆ ಅಂಚೆ ಬಕ್ಷಿ ತಿಪ್ಪಯ್ಯನವರದು ಆಧುನಿಕತೆಗೆ ಬೇಗ ಪ್ರವೇಶಿಸಿದ ಕೆಲವೇ ಸಂಕೇತಿ ಮನೆತನಗಳಲ್ಲಿ ಒಂದು.
ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿಯೂ ತಿಪ್ಪಯ್ಯನವರು ಸಚಿವರಾಗಿದ್ದರು. ಮತಾಂತರ ಪ್ರವೃತ್ತಿಯ ದೌರ್ಬಲ್ಯವಿದ್ದ ಟಿಪ್ಪು ಆಗಾಗ ಹಿಂದೂ ಅಧಿಕಾರಿಗಳಿಗೆ ಕಿರುಕುಳ ಕೊಡುತ್ತಿದ್ದ. ತಮ್ಮ ಪ್ರಾಮಾಣಿಕತೆ, ಬುದ್ಧಿ ಸಾಮರ್ಥ್ಯ. ಕರ್ತೃತ್ವಶೀಲತೆಯಿಂದಲೇ ಈ ಉಪಟಳಗಳಿಂದ ಪಾರಾಗಬೇಕಾಗಿತ್ತು. ಸಂಸ್ಥಾನವು ಎದುರಿಸಿದ ಲೆಕ್ಕ ಪತ್ರಗಳ ಬಿಕ್ಕಟ್ಟೊಂದನ್ನು ಪರಿಹರಿಸಬೇಕಾದ ಜವಾಬ್ದಾರಿಯನ್ನು ಒಮ್ಮೆ ತಿಪ್ಪಯ್ಯನವರಿಗೆ ವಹಿಸಲಾಯಿತು. ಉನ್ನತ ಮುಸಲ್ಮಾನ ಅಧಿಕಾರಿಗಳ ಸುತ್ತ ಹೆಣೆದುಕೊಂಡಿದ್ದ ಈ ಹಗರಣವನ್ನು ಉಪಾಯವಾಗಿ ಕೊನೆಮುಟ್ಟಿಸಬೇಕಾಗಿತ್ತು. ಯಾವ ಮಗ್ಗುಲಿಗೆ ವಾಲಿದರೂ ಕತ್ತಿಯ ಮೊನೆಯ ಅಪಾಯ ಇದ್ದೇ ಇತ್ತು. ಅಂಥ ಸಂದರ್ಭದಲ್ಲಿ ತಿಪ್ಪಯ್ಯನವರು ಶ್ರೀರಂಗಪಟ್ಟಣದ ರಂಗನಾಥನ ಮೊರೆ ಹೊಕ್ಕರು. ಈ ಸಮಸ್ಯೆ ಯಶಸ್ವಿಯಾಗಿ ಬಗೆಹರಿದರೆ ಸ್ವಾಮಿಗೆ ಪುಷ್ಪ ಬೃಂದಾವನೋತ್ಸವ ನಡೆಸುವುದಾಗಿ ಹರಕೆ ಹೊತ್ತರು; ಟಿಪ್ಪು ಮೆಚ್ಚುವ ರೀತಿಯಲ್ಲಿ ಸಮಸ್ಯೆಗೆ ತೆರೆ ಎಳೆದರು; ಎಲ್ಲ ಬಣದ ಮುಸಲ್ಮಾನ ಅಧಿಕಾರಿಗಳೂ ಅನಿವಾರ್ಯವಾಗಿ ಒಪ್ಪಿ ತಟಸ್ಥರಾಗುವಂತೆ ಈ ಸೂಕ್ಷ್ಮ ಕೆಲಸವನ್ನು ನಿರ್ವಹಿಸಿದರು. ತಿಪ್ಪಯ್ಯನವರು ಸನ್ಮಾನಿತರಾದರು. ಅದು ಉತ್ಥಾನ ದ್ವಾದಶಿಯ ದಿನ. ಅಂದೇ ಪುಷ್ಪ ಬೃಂದಾವನೋತ್ಸವವನ್ನೂ ಪ್ರಾರಂಭಿಸಿದರು. ಅದು ಆ ಮನೆತನದವರೇ ನಡೆಸುವ ವಾರ್ಷಿಕ ಉತ್ಸವವಾಗಿ ಮುಂದುವರಿಯಿತು.
ಬಕ್ಷಿ ತಿಪ್ಪಯ್ಯನವರಿಗೆ (ಈಗಿನ) ಹಾಸನ ಜಿಲ್ಲೆಯಲ್ಲಿ ಹಲವು ಇನಾಂ ಗ್ರಾಮಗಳಿದ್ದವು. ಅಲ್ಲಿ ಬೆಳೆದಿರುತ್ತಿದ್ದ ಗಂಧದ ಮರಗಳನ್ನು ಕೊಂಡು ಸರ್ಕಾರ ಹಣ ಕೊಡುತ್ತಿತ್ತು. ಹಾಗೆ ಬಂದ ‘ಗಂಧದ ಹಣ’ ದಿಂದ ಈ ಉತ್ಸವ ಅನೂಚಾನವಾಗಿ ನಡೆದುಕೊಂಡು ಹೋಗಬೇಕೆಂದು ತಿಪ್ಪಯ್ಯನವರು ‘ವಿಲ್’ ಬರೆದಿಟ್ಟರು. ಅದರಂತೆ ಅದು ತಲೆಮಾರುಗಳನ್ನು ದಾಟಿ ನಡೆದುಕೊಂಡು ಬಂತು. ಮುಂದೆ ಇನಾಂ ಪದ್ಧತಿ ರದ್ದು ಆಯಿತು. ಈ ವಂಶದವರು ಹಲವು ಕಡೆ ಚದುರಿದ್ದರು. ಉತ್ಸವವೂ ನಿಂತಿತು. ಇಂಥ ಸಂದರ್ಭದಲ್ಲಿ ಒಮ್ಮೆ ಸಬ್‌ಓವರ್‌ಸೀಯರ್ ಟಿ. ರಂಗಸ್ವಾಮಯ್ಯನವರು ಶ್ರೀರಂಗಪಟ್ಟಣಕ್ಕೆ ವರ್ಗವಾಗಿ ಬಂದರು. ರಾಮನಾಥಪುರ, ಕಟ್ಟೆಪುರದ ನಾಲೆ ಕಾಮಗಾರಿಯನ್ನು ನಿರ್ವಹಿಸಿ ಜನಪ್ರಿಯರಾಗಿದ್ದವರು ಅವರು. ಈ ಉತ್ಸವವನ್ನು ಮುಂದುವರೆಸಬೇಕೆಂಬ ಪ್ರೇರಣೆಯಾಯಿತು; ಮತ್ತೆ ನಡೆಸತೊಡಗಿದರು. ಅವರ ಮಗ ಎಸ್.ಆರ್. ವೆಂಕಟರಾಮಯ್ಯನವರು ತಮಗೆ ನೌಕರಿ ಇಲ್ಲದಾಗಲೂ ಬಿಡದೆ ಅದನ್ನು ಮುಂದುವರೆಸಿದರು. ಮುಂದೆ ನೌಕರಿ ದೊರೆತಾಗ, ‘ಕೆಲಸ ಇಲ್ಲದಾಗಲೂ ಉತ್ಸವ ಮಾಡಿಸಿದ್ದೆ; ದೇವರು ಈಗ ಕೆಲಸ ಕೊಡಿಸಿದ್ದಾನೆ; ಈಗ ಬಿಡುವುದುಂಟೆ?’ ಎಂಬ ಭಕ್ತಿ ವಿಶೇಷದಿಂದ ಪರಂಪರೆಯನ್ನು ಬೆಳೆಸಿದರು.
ಬಕ್ಷಿ ತಿಪ್ಪಯ್ಯನವರ ವಂಶದವರಿಗೆ ‘ಮೈಸೂರು ಮನೆಯವರು’ ಎಂಬ ನಾಮಧೇಯವಿದೆ. ಅದರ ಮೂರು ಕವಲುಗಳು ‘ಹೊಸಮನೆ’, ‘ಹಿಂದಿನ ಮನೆ’, ‘ತೊಟ್ಟಿ ಮನೆ’ ಎನಿಸಿವೆ. ವೆಂಕಟರಾಮಯ್ಯನವರು ‘ಹೊಸಮನೆ’ ಕವಲಿಗೆ ಸೇರಿದವರು. ಈ ಮೂರೂ ಕವಲುಗಳೂ ಪರ್ಯಾಯವಾಗಿ ಮೂರು ವರ್ಷಗಳಿಗೊಮ್ಮೆ ಈ ಉತ್ಸವದ ಹೊಣೆ ಹೊತ್ತು ಇಂದಿಗೂ ನಡೆಸಿಕೊಂಡು ಬರುತ್ತಿವೆ.

Q91

ವೆಂಕಟರಾಮಯ್ಯನವರು ಯಾವ ಕವಲಿಗೆ ಸೇರಿದ್ದರು ?

  1. (1) ಹೊಸ ಮನೆ
  2. (2) ಹಿಂದಿನ ಮನೆ
  3. (3) ಮುಂದಿನ ಮನೆ
  4. (4) ತೊಟ್ಟಿ ಮನೆ
See answer and solution
Q92

ಗಂಧದ ಮರದ ಮಾರಾಟದಿಂದ ಬರುವ ಹಣವನ್ನು ತಿಪ್ಪಯ್ಯನವರು ಏನು ಮಾಡಿದರು ?

  1. (1) ನಾಲೆಗಳನ್ನು ನಿರ್ಮಿಸಿದರು
  2. (2) ಪುಷ್ಪ ಬೃಂದಾವನೋತ್ಸವ ನಡೆಸಲು ವಿಲ್ ಮಾಡಿಟ್ಟರು
  3. (3) ದಾನ ಮಾಡಿದರು
  4. (4) ದೇವಾಲಯ ನಿರ್ಮಿಸಿದರು
See answer and solution
Q93

ಬಕ್ಷಿ ತಿಮ್ಮಪ್ಪನಿಗೆ ಎಲ್ಲಿ ಇನಾಂ ಗ್ರಾಮಗಳಿದ್ದವು ?

  1. (1) ಮೈಸೂರು
  2. (2) ಶ್ರೀರಂಗಪಟ್ಟಣ
  3. (3) ಬೆಂಗಳೂರು
  4. (4) ಹಾಸನ
See answer and solution
Q94

‘ಪರ್ಯಾಯವಾಗಿ’ ಪದದ ಅರ್ಥ :

  1. (1) ಹೆಚ್ಚುವರಿಯಾಗಿ
  2. (2) ವಿಪರೀತವಾಗಿ
  3. (3) ಹೊಸದಾಗಿ
  4. (4) ಬದಲಿಯಾಗಿ
See answer and solution
Q95

ಬೃಂದಾವನೋತ್ಸವ ಪದದಲ್ಲಿನ ಸಂಧಿ ಯಾವುದು ?

  1. (1) ಜಸ್ತ್ವ ಸಂಧಿ
  2. (2) ಗುಣ ಸಂಧಿ
  3. (3) ಆದೇಶ ಸಂಧಿ
  4. (4) ಯಣ್ ಸಂಧಿ
See answer and solution
Q96

‘ಇನಾಂ’ ಪದದ ಮೂಲ ಯಾವುದು ?

  1. (1) ಪರ್ಷಿಯನ್
  2. (2) ಮರಾಠಿ
  3. (3) ಹಿಂದಿ
  4. (4) ಕನ್ನಡ
See answer and solution
Q97

ವೆಂಕಟರಾಮಯ್ಯನವರು ಯಾವ ಮನೆತನಕ್ಕೆ ಸೇರಿದ್ದರು ?

  1. (1) ಟಿಪ್ಪು ಮನೆತನ
  2. (2) ಸಂಕೇತಿ ಮನೆತನ
  3. (3) ಶ್ರೀರಂಗಪಟ್ಟಣ ಮನೆತನ
  4. (4) ಮೈಸೂರು ಮನೆತನ
See answer and solution
Q98

ಟಿಪ್ಪು ಸುಲ್ತಾನರ ಕಾಲದಲ್ಲಿ ಯಾರು ಸಚಿವರಾಗಿದ್ದರು ?

  1. (1) ತಿಪ್ಪಯ್ಯ
  2. (2) ರಂಗಸ್ವಾಮಯ್ಯ
  3. (3) ಸುಬ್ಬರಾಯ ಶಾಸ್ತ್ರಿಗಳು
  4. (4) ವೆಂಕಟರಾಮಯ್ಯ
See answer and solution
Q99

‘ಗಂಧದ’ ಪದದಲ್ಲಿರುವ ವಿಭಕ್ತಿ ಪ್ರತ್ಯಯ :

  1. (1) ದ್ವಿತೀಯ ವಿಭಕ್ತಿ
  2. (2) ಸಪ್ತಮಿ ವಿಭಕ್ತಿ
  3. (3) ಪ್ರಥಮ ವಿಭಕ್ತಿ
  4. (4) ಷಷ್ಠಿ ವಿಭಕ್ತಿ
See answer and solution

Passage

ನಿರ್ದೇಶನ : ಈ ಕೆಳಗಿನ ಕವನವನ್ನು ಓದಿ, ಅನುಸರಿಸಿ ಬರುವ ಪ್ರಶ್ನೆಗಳಿಗೆ (ಪ್ರಶ್ನೆ ಸಂಖ್ಯೆ : 100-105) ಸೂಕ್ತ ಉತ್ತರವನ್ನು ಆರಿಸುವುದರ ಮೂಲಕ ಉತ್ತರಿಸಿ.
ನಿಮ್ಮೊಡನಿದ್ದೂ ನಿಮ್ಮಂತಾಗದೆ ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ, ಈ ನೆಲದಲ್ಲಿ ಬೇರೊತ್ತಿದರೂ ಬೀಗಿ
ಪರಕೀಯನಾಗಿ ತಲೆಯೆತ್ತುವುದಿದೆ ನೋಡಿ
ಅದು ಬಲುಕಷ್ಟದ ಕೆಲಸ.
ವೃತ್ತದಲ್ಲಿ ಉನ್ಮತ್ತರಾದ
ನಿಮ್ಮ ಕುಡಿತ ಕುಣಿತ ಕೂಟಗಳು ಕೆಣಕಿ
ಕುಣಿಕೆ ಎಸೆದಿದ್ದರೂ
ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ :
ಸಂಯಮವನ್ನೇ ಪೋಷಿಸಿ ಸಾಕುತ್ತ
ರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.

Q100

ಮೊದಲನೆಯ ಕಡುಕಷ್ಟದ ಕೆಲಸ ಯಾವುದು ?

  1. (1) ಒಂಟಿಯಾಗಿ ಇರುವುದು
  2. (2) ಪರಕೀಯನಾಗುವುದು
  3. (3) ನಿಮ್ಮೊಡನೆ ಇದ್ದೂ ಇಲ್ಲದಂತೆ ಇರುವುದು
  4. (4) ನನ್ನತನವಿದ್ದೂ ಪರಕೀಯನಂತೆ ಆಗುವುದು
See answer and solution
Q101

ಎರಡನೆಯ ಕಷ್ಟದ ಕೆಲಸ ಯಾವುದು ?

  1. (1) ಪಂಚೇಂದ್ರಿಯಕ್ಕೆ ಲಗಾಮು ಹಾಕಿ ಜಾರುವುದು
  2. (2) ಇಂದ್ರಿಯಗಳನ್ನು ಹತೋಟಿಯಲ್ಲಿಡುತ್ತ ಸಂಯಮ ತೋರುವುದು
  3. (3) ಪಂಚೇಂದ್ರಿಯಗಳು ಹತೋಟಿಗೆ ಬಾರದೆ ಒದ್ದಾಡುವುದು
  4. (4) ಹಗ್ಗದ ಮೇಲೆ ಡೊಂಬರಾಟ ನಡೆಸುವುದು
See answer and solution
Q102

‘ನೆಲದಲ್ಲಿ ಬೇರೂರು’ – ಈ ವಾಕ್ಯಾಂಶದ ಅರ್ಥ :

  1. (1) ಹುಟ್ಟಿದ ನೆಲದಲ್ಲಿ ನೆಲಸು
  2. (2) ಮಣ್ಣಿಗೆ ಅಂಟಿಕೊಳ್ಳುವುದು
  3. (3) ಈ ಭೂಮಿಯ ಬದುಕೇ ಮುಖ್ಯವೆಂದು ತಿಳಿಯುವುದು
  4. (4) ಒಬ್ಬರಿಗೆ ಭಾರವಾಗು
See answer and solution
Q103

‘ಉನ್ಮತ್ತ’ – ಈ ಪದದ ಅರ್ಥ :

  1. (1) ಬುದ್ಧಿ ಭ್ರಮಣೆ
  2. (2) ಆವೇಶ
  3. (3) ಅತಿ ಎತ್ತರ
  4. (4) ಸಿಟ್ಟಾಗು
See answer and solution
Q104

‘ನಿಮ್ಮೊಡನಿದ್ದೂ’ – ಈ ಪದವನ್ನು ಬಿಡಿಸಿ ಬರೆಯಿರಿ.

  1. (1) ನಿಮ್ಮ + ಒಡನಿದ್ದೂ
  2. (2) ನಿಮ್ಮೊಡ + ನಿದ್ದೂ
  3. (3) ನಿಮ್ಮ + ಒಡನ್ + ಇದ್ದೂ
  4. (4) ನಿಮ್ + ಒಡ + ನಿದ್ದೂ
See answer and solution
Q105

‘ಲಗಾಮು’ – ಈ ಪದದ ಮೂಲ ಯಾವುದು ?

  1. (1) ಹಿಂದೂಸ್ತಾನಿ
  2. (2) ಹಿಂದಿ
  3. (3) ಉರ್ದು
  4. (4) ಪ್ರಾಕೃತ
See answer and solution
Q106

ಹೇಳಿಕೆ (A) : ತರಗತಿಯಲ್ಲಿನ ವಿದ್ಯಾರ್ಥಿಗಳ ಕಲಿಕೆಯ ಅನುಭವಗಳು ಮಕ್ಕಳ ಜೀವನ ಹಾಗೂ ಅವರ ಸಂದರ್ಭಕ್ಕೆ ಆಳವಾಗಿ ಸಂಬಂಧಿತವಾಗಿದೆ.
ಕಾರಣ (R) : ಮಕ್ಕಳ ಹಿಂದಿನ ತಿಳುವಳಿಕೆಯ ಮೇಲೆ ಕಲಿಕೆಯ ಅನುಭವಗಳನ್ನು ರೂಪಿಸಲಾಗಿರುತ್ತದೆ.
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

  1. (1) (A) ಮತ್ತು (R) ಎರಡೂ ಸರಿ, ಆದರೆ (R) ಅನ್ನುವುದು **(A)**ಯ ಸರಿಯಾದ ವಿವರಣೆ ಅಲ್ಲ.
  2. (2) (A) ಸರಿ ಇದೆ, ಆದರೆ (R) ತಪ್ಪು.
  3. (3) (A) ತಪ್ಪು, ಆದರೆ (R) ಸರಿ ಇದೆ.
  4. (4) (A) ಮತ್ತು (R) ಎರಡೂ ಸರಿ, ಮತ್ತು (R) ಅನ್ನುವುದು **(A)**ಯ ಸರಿಯಾದ ಹೇಳಿಕೆಯಾಗಿದೆ.
See answer and solution
Q107

ಭಾಷಾ ಕಲಿಕೆಯಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಸರಿ ಅಲ್ಲ ?

  1. (1) ಭಾಷಾ ಕಲಿಕೆಗೆ ಸಮಯ ಹಿಡಿಯುತ್ತದೆ
  2. (2) ಭಾಷಾ ಕಲಿಕೆಯು ಅರ್ಥವನ್ನು ಸ್ಪಷ್ಟಿಸುವಂಥದ್ದು
  3. (3) ಭಾಷಾ ಕಲಿಕೆಗೆ ವ್ಯಾಕರಣ ಕಲಿಕೆ ಅನಿವಾರ್ಯ
  4. (4) ಎಲ್ಲ ಕಲಿಕಾದಾರರು ಭಾಷೆಯ ಜೊತೆಗೆ ಸಾಕಷ್ಟು ರೂಢಿ ಮಾಡಿಕೊಳ್ಳುವ ಪ್ರಸಂಗ ಸೃಜಿಸಿದರೆ ಭಾಷೆಯನ್ನು ಕಲಿಯಬಲ್ಲರು
See answer and solution
Q108

ಅಂಗಡಿಯಲ್ಲಿ ವಸ್ತುವನ್ನು ಕೊಳ್ಳಲು ವಿದ್ಯಾರ್ಥಿಗಳು ಕ್ರಿಯಾತ್ಮಕವಾದ ಬಾಹ್ಯ ಅನುಭವವನ್ನು ಉಪಯೋಗಿಸಬಲ್ಲರು ಎನ್ನುವುದನ್ನು ತಿಳಿಯಲು ವಿದ್ಯಾರ್ಥಿಗಳು ಇದನ್ನು ಬಳಸುವುದು ಸರಿಯಾಗಿದೆ :

  1. (1) ತಮ್ಮ ಆಹಾರದ ಆಯ್ಕೆಯನ್ನು ಕುರಿತು ಬರೆಯುವುದು
  2. (2) ಅಂಗಡಿಯವನು ಮತ್ತು ಗ್ರಾಹಕರು ಇಬ್ಬರಿಗೂ ಸಣ್ಣಕಥೆ ಓದುವುದು
  3. (3) ಅಂಗಡಿಯವನು ಮತ್ತು ಗ್ರಾಹಕರ ನಡುವಿನ ಘಟನೆಯನ್ನು ದೃಶ್ಯಾವಳಿ ಮಾಡುವುದು
  4. (4) ಅಂಗಡಿಯವನು ಮತ್ತು ಗ್ರಾಹಕನ ನಡುವೆ ಸಣ್ಣ ಸಂಭಾಷಣೆ ಬರೆಯುವುದು
See answer and solution
Q109

ಭಾಷಾ ಕಲಿಕೆಯ ಕೆಲವು ಆಯಾಮಗಳನ್ನು ಶಿಕ್ಷಕಿ ಹುಡುಕಿದ್ದಾಳೆ.
ಉದಾಹರಣೆಗೆ : ವೈಜ್ಞಾನಿಕ ತತ್ವಗಳ ಮೇಲೆ ಇರುವ ಪಠ್ಯವನ್ನು ಅರಿತು ಓದುವುದು. ಈ ಒಂದು ಅಂಶದಲ್ಲಿ ಕಲಿಯಲು ಕಷ್ಟ ಪಡುವ ವಿದ್ಯಾರ್ಥಿಗಳನ್ನು ಅವಳು ಆಯ್ಕೆ ಮಾಡುವಳು. ಅವರಿಗೆ ಅವಳು ಪ್ರತ್ಯೇಕವಾದ ಪಾಠವನ್ನು ಮಾಡಿ ತತ್ವವನ್ನು ತಿಳಿಯುವಂತೆ ಮಾಡುವಳು. ಈ ಅಭ್ಯಾಸವನ್ನು ಏನೆಂದು ಕರೆಯುತ್ತಾರೆ ?

  1. (1) ಉನ್ನತಮಟ್ಟದ ಕೌಶಲ್ಯಗಳು
  2. (2) ಯೋಚನೆ ಮಾಡಲು ಹಚ್ಚುವ ಕೌಶಲ್ಯಗಳು
  3. (3) ತಿರುಗಿ ಮನನ ಮಾಡುವ ಕಲಿಸುವಿಕೆ (Feedback teaching)
  4. (4) ಪರಿಹಾರಾತ್ಮಕ ಕಲಿಸುವಿಕೆ (Remedial Teaching)
See answer and solution
Q110

ಈ ಕೆಳಗಿನವುಗಳಲ್ಲಿ ಯಾವುದು ಓದುವ ಉಪಕೌಶಲ್ಯ ಅಲ್ಲ ?

  1. (1) ಬಳಕೆಯಲ್ಲಿರದ ನಿಘಂಟಿನ ಶಬ್ದಗಳ ಅರ್ಥಗಳನ್ನು ಹುಡುಕಿ ಅವುಗಳನ್ನು ಬಳಸುವುದು
  2. (2) ನಿರ್ದಿಷ್ಟವಾದ ಬೇಕಾದ ಮಾಹಿತಿಯನ್ನು ವೇಗವಾಗಿ ಹುಡುಕುವುದು
  3. (3) ಪ್ರತಿ ಪದದ ಉಚ್ಚಾರವನ್ನು ತಿಳಿಯುವುದು
  4. (4) ಶಬ್ದ ಸಂಪತ್ತು ಅರಿಯುವುದು, ಪ್ರಮುಖ ಶಬ್ದಗಳನ್ನು ಹುಡುಕುವುದು
See answer and solution
Q111

ಹೇಳಿಕೆ (A) : ವಿದ್ಯಾರ್ಥಿಯ ‘ಪೋರ್ಟ್‌ಫೋಲಿಯೊ’ ವಿದ್ಯಾರ್ಥಿಯ ಕೆಲಸದ ಉದ್ದೇಶಪೂರ್ವಕ ಸಂಗ್ರಹದ ವಿಭಾಗವಾಗಿದೆ.
ಕಾರಣ (R) : ವಿದ್ಯಾರ್ಥಿಯ ಕೆಲಸ ಕುರಿತ ‘ಪೋರ್ಟ್‌ಫೋಲಿಯೊ’ ವಿದ್ಯಾರ್ಥಿಯು ತನ್ನ ಓದುವಿಕೆಯ ಬಲ ಮತ್ತು ಶಕ್ತಿಹೀನತೆಯನ್ನು ಮೌಲ್ಯಮಾಪನ ಮಾಡಿಕೊಳ್ಳಲು ಸಹಾಯ ಮಾಡುತ್ತವೆ.
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

  1. (1) (A) ಮತ್ತು (R) ಎರಡೂ ಸರಿ, ಆದರೆ (R) ಅನ್ನುವುದು (A) ಯ ಸರಿಯಾದ ವಿವರಣೆ ಅಲ್ಲ.
  2. (2) (A) ಸರಿ ಇದೆ, ಆದರೆ (R) ತಪ್ಪು.
  3. (3) (A) ತಪ್ಪು, ಆದರೆ (R) ಸರಿ ಇದೆ.
  4. (4) (A) ಮತ್ತು (R) ಎರಡೂ ಸರಿ, ಮತ್ತು (R) ಅನ್ನುವುದು (A) ಯ ಸರಿಯಾದ ವಿವರಣೆಯಾಗಿದೆ.
See answer and solution
Q112

ವಿದ್ಯಾರ್ಥಿಗಳಲ್ಲಿ ಶಬ್ದ ಸಂಪತ್ತು ಹೆಚ್ಚಿಸಲು, ಶಿಕ್ಷಕಿಯು ಭಾಷೆಯು ಇರುವ ಸಾಮಗ್ರಿಯನ್ನು ಬಳಸುವರು, ಇದು ವಿದ್ಯಾರ್ಥಿಗಳಿಗೆ ಸುಲಭವಾಗಿ ಇರುವಂತೆಯೂ ಮತ್ತು ಅಥೆಂಟಿಕ್ ಸಾಮಗ್ರಿಯೂ ಆಗಿರುವುದು.
ಆ ಸಾಮಗ್ರಿಯು :

  1. (1) ರೋಲ್ ಕಾರ್ಡುಗಳು
  2. (2) ದ್ವಿಭಾಷಿಕ ನಿಘಂಟುಗಳು
  3. (3) ವಿಂಗಡಿಸಲಾದ ಓದಿಕೆಗಳು (Graded Readers)
  4. (4) ದಿನಪತ್ರಿಕೆ
See answer and solution
Q113

ಭಾಷಾ ಅಧ್ಯಾಪಿಕೆಯು ವಿದ್ಯಾರ್ಥಿಗಳಿಗೆ ಅವರ ಕಲಿಕೆಯ ಶೈಲಿ ಮತ್ತು ಆಯ್ಕೆಯನ್ನು ಅರಿಯಲು ಪ್ರಶ್ನಾವಳಿಗಳನ್ನು ಕೊಡುವಳು.
ಇಲ್ಲಿ ಅಧ್ಯಾಪಿಕೆ ಈ ಪಾತ್ರ ವಹಿಸುತ್ತಿದ್ದಾಳೆ :

  1. (1) ಪ್ಲಾನರ್
  2. (2) ಪರಿಣಿತ ಮಾಹಿತಿ ಕೊಡುವವ
  3. (3) ಕಂಡುಹಿಡಿಯುವವನು (Diagnotician)
  4. (4) ಮ್ಯಾನೇಜರ್
See answer and solution
Q114

ಒಂದನೆಯ ತರಗತಿಯ ಮಕ್ಕಳಿಗೆ ಶಿಕ್ಷಕಿಯು ಗೋಡೆಯ ಮೇಲೆ ಬರೆಯುವುದು, ಗೀಚುವುದು–ಹೀಗೆ ಏನಾದರೂ ಮಾಡಲು ಹೇಳುತ್ತಾಳೆ. ಅವಳು ಏನನ್ನು ಉತ್ತೇಜನ ಕೊಡುತ್ತಿದ್ದಾಳೆ ?

  1. (1) ಆನಂದ ಮತ್ತು ವಿನೋದ
  2. (2) ಬರವಣಿಗೆಯ ಕೌಶಲ್ಯದ ಅಭಿವೃದ್ಧಿ
  3. (3) ಅಕ್ಷರಗಳ ಬರವಣಿಗೆಯ ಬುನಾದಿ
  4. (4) ಬೆಳೆಯುವ ಸಾಕ್ಷರತಾ ಅಭಿವೃದ್ಧಿ
See answer and solution
Q115

ಈ ಕೆಳಗಿನವುಗಳಲ್ಲಿ ಚಿತ್ರಗಳಿಗೆ ಸಂಬಂಧಿಸಿದಂತೆ ಯಾವುದು ಸರಿ ಅಲ್ಲ ?
ಪುಸ್ತಕದಲ್ಲಿ ಚಿತ್ರಗಳು ಮತ್ತು ಉದಾಹರಣೆಗಳು –

  1. (1) ಮಕ್ಕಳಲ್ಲಿ ಆಸಕ್ತಿಯನ್ನು ಉಳಿಸುತ್ತವೆ
  2. (2) ಇಂಥ ಚಿತ್ರಗಳನ್ನು ಬರೆಯಲು ಅವಕಾಶವನ್ನು ಒದಗಿಸುತ್ತವೆ
  3. (3) ಅಪರಿಚಿತ ಮತ್ತು ನೆನಪಿಡುವ ಸಂದರ್ಭಗಳಲ್ಲಿ ಭಾಷೆಯನ್ನು ಬೆಳೆಸಲು ಸಹಾಯ ಮಾಡುತ್ತವೆ
  4. (4) ವಸ್ತುವನ್ನು ವಿವರಿಸಲು ಪೋಷಿಸುತ್ತವೆ
See answer and solution
Q116

ತರುಣ (Young) ಕಲಿಯುವವನಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿ ?

  1. (1) ತರುಣ ಕಲಿಯುವವರು ಅಮೂರ್ತ ತತ್ವಗಳನ್ನು ಅರಿಯಲು ಕಷ್ಟಪಡುವರು
  2. (2) ತಾರುಣ್ಯದ ಕಲಿಕೆಯವರು ಅಮೂರ್ತ ತತ್ವಗಳನ್ನು ಪಾರ್ಶ್ವಿಕವಾಗಿ ತಿಳಿಯುವರು
  3. (3) ತಾರುಣ್ಯದ ಕಲಿಯುವವರು ಅಮೂರ್ತ ತತ್ವಗಳಿಂದ ಉತ್ತೇಜನಗೊಳ್ಳುವರು
  4. (4) ತರುಣ ಕಲಿಯುವವರು ಅಮೂರ್ತ ತತ್ವಗಳನ್ನು ಅರಿಯಬಲ್ಲರು
See answer and solution
Q117

ನಿಮ್ಮ ತರಗತಿಯಲ್ಲಿ ಅಧ್ಯಾಪಕನಾಗಿ ವಿದ್ಯಾರ್ಥಿ ಪರಸ್ಪರ ಸಂವಹನಕ್ಕಾಗಿ ನೀವು ಏನು ಮಾಡುತ್ತೀರಿ ?
(a) ವಿದ್ಯಾರ್ಥಿಗೆ ಹೆಚ್ಚು ಪ್ರಶ್ನೆಗಳನ್ನು ಕೇಳಲು ಹೇಳುತ್ತೆವೆ
(b) ಜೋಡಿ ಮತ್ತು ಸಮೂಹ ಗುಂಪುಗಳನ್ನಾಗಿ ಮಾಡಿ, ವಿದ್ಯಾರ್ಥಿಗಳಿಂದ ಅಭಿಪ್ರಾಯ ಪಡೆಯುವುದು
(c) ಪಠ್ಯವನ್ನು ಜೋರಾಗಿ ಓದುವಂತೆ ಹೇಳುವುದು, ಮತ್ತು ವೈಯಕ್ತಿಕವಾಗಿ ಅದಕ್ಕೆ ಪ್ರತಿಕ್ರಿಯಿಸಲು ಹೇಳುವುದು ಈ ಮೂಲಕ ತ್ರೈಮಾಸಿಕ ಕಲಿಕೆ ಸಾಧ್ಯವಾಗುತ್ತದೆ.
(d) ಸಂಭಾಷಣೆಯನ್ನು ಪರಸ್ಪರ ಓದುವಂತೆ ಮತ್ತು ಪ್ರಶ್ನೆಗಳನ್ನು ಪರಸ್ಪರ ಕೇಳುವಂತೆ ಮಾಡುವುದು

  1. (1) (b), (c), (d) ಇವು ಸರಿಯಾಗಿವೆ.
  2. (2) (a), (b), (d) ಇವು ಸರಿಯಾಗಿವೆ.
  3. (3) (a), (c), (d) ಇವು ಸರಿಯಾಗಿವೆ.
  4. (4) (a), (b), (c) ಮೂರೂ ಸರಿಯಾಗಿವೆ.
See answer and solution
Q118

ಭಾಷೆಯ ಬೆಳವಣಿಗೆಯನ್ನು ಕುರಿತು ಜ್ಞಾನಾತ್ಮಕ ತತ್ವ (cognative) ವು ಭಾಷೆಯನ್ನು ಕುರಿತು ಹೀಗೆ ಹೇಳುತ್ತದೆ :

  1. (1) ಬಹುಮಾನ – ಶಿಕ್ಷೆಯ ಕ್ರಿಯೆಯ ಮೂಲಕ ಕಲಿಯುವಂತದ್ದು
  2. (2) ಸಮಾಜದಲ್ಲಿ ಸಂವಹನದ ಮೂಲಕ ಕಲಿಯುವಂತದ್ದು
  3. (3) ಮಾತನಾಡುವ ಮುನ್ನ, ಈ ಕುರಿತು ಮಗುವಿನ ಪರಿಕಲ್ಪನಾತ್ಮಕ ತಿಳುವಳಿಕೆ ಮೇಲೆ ಅದು ಆಧಾರಿತ
  4. (4) ಅದು ವ್ಯಕ್ತಿಯ ಅಂತಸ್ಥ ಸಾಮರ್ಥ್ಯ
See answer and solution
Q119

ಸಮರ್ಥನೆ (A) : ಭಾಷೆಯು ಸಾಂಸ್ಕೃತಿಕ ತಿಳುವಳಿಕೆಯ ಮತ್ತು ಅಭಿವ್ಯಕ್ತಿಯ ಮುಖ್ಯವಾದ ಭಾಗವಾಗಿದೆ. ಮಕ್ಕಳ ಸಾಮರ್ಥ್ಯ ಬೆಳವಣಿಗೆಯಲ್ಲಿ ಇದು ಬಹುಮುಖ್ಯವಾದ ಸಾಮರ್ಥ್ಯವೆಂದೆ ತಿಳಿಯಲಾಗಿದೆ.
ಕಾರಣ (R) : ಸಾಂಸ್ಕೃತಿಕ ತಿಳುವಳಿಕೆ ಮತ್ತು ಅಭಿವ್ಯಕ್ತಿಗಳ ಸಾಮರ್ಥ್ಯವು ಮಕ್ಕಳಲ್ಲಿ ಒಂದು ಬಗೆಯ ಗುರುತು, ತಮ್ಮದೆನ್ನುವ ಅಂಶವನ್ನು ರೂಪಿಸುತ್ತವೆ ಮತ್ತು ದೇಶೀಯ ಸಂಸ್ಕೃತಿ ಮತ್ತು ಚಹರೆಗಳನ್ನು ಶ್ಲಾಘಿಸುವಂತೆ ಮಾಡುತ್ತವೆ.
ಈ ಕೆಳಗಿನವುಗಳಲ್ಲಿ ಅತೀ ಸರಿಯಾದುದನ್ನು ಆರಿಸಿ.

  1. (1) (A) ಮತ್ತು (R) ಎರಡೂ ಸರಿ, ಆದರೆ (R) ಅನ್ನುವುದು (A) ಯ ಸರಿಯಾದ ವಿವರಣೆ ಅಲ್ಲ.
  2. (2) (A) ಸರಿಯಾಗಿದೆ, ಆದರೆ (R) ತಪ್ಪು.
  3. (3) (A) ತಪ್ಪು, ಆದರೆ (R) ಸರಿಯಾಗಿದೆ.
  4. (4) (A) ಮತ್ತು (R) ಎರಡೂ ಸರಿ, ಮತ್ತು (R) ಅನ್ನುವುದು (A) ಯ ಸರಿಯಾದ ವಿವರಣೆ.
See answer and solution
Q120

ಬರಹಗಾರರು ಬರೆದ ಕಥೆಗಳು, ಕವನಗಳು, ನಾಟಕಗಳು ಮತ್ತು ಉಳಿದ ಬರಹಗಳನ್ನು ಪಠ್ಯಪುಸ್ತಕಗಳು ಒಳಗೊಂಡಿರುತ್ತವೆ. ಇಂಥ ಸಾಮಗ್ರಿಗಳಲ್ಲಿ ನಾವು ಆಯ್ಕೆಯನ್ನು ಮಾಡಿಕೊಳ್ಳಬೇಕು. ಏಕೆಂದರೆ ಅವುಗಳು :

  1. (1) ಪಠ್ಯಪುಸ್ತಕದಲ್ಲಿ ಬಳಸುವುದಕ್ಕೋಸ್ಕರವೇ ಬರೆದವುಗಳು
  2. (2) ಪ್ರಸಿದ್ಧ ಬರಹಗಾರರಿಂದ ಬರೆದವುಗಳು
  3. (3) ಅವು ಸರಳ ಭಾಷೆಯಲ್ಲಿ ಇರುತ್ತವೆ
  4. (4) ಅಥೆಂಟಿಕ್ ಮತ್ತು ಸಹಜ ಭಾಷೆಯಲ್ಲಿ ಇರುತ್ತವೆ
See answer and solution

Passage

ನಿರ್ದೇಶನ : ಈ ಕೆಳಗಿನ ಲೇಖನ ಭಾಗವನ್ನು ಓದಿ, ಅನುಸರಿಸಿ ಬರುವ ಪ್ರಶ್ನೆಗಳಿಗೆ (ಪ್ರಶ್ನೆ ಸಂಖ್ಯೆ : 121-128) ಸೂಕ್ತ ಉತ್ತರವನ್ನು ಆರಿಸುವುದರ ಮೂಲಕ ಉತ್ತರಿಸಿ.
ಗ್ರೀಕ್ ಭಾಷೆಯಲ್ಲಿ ಮುಥೋಸ್ ಎನ್ನುವ ಪದವು ಚಾಲ್ತಿಯಲ್ಲಿ ಇದೆ. ಅದನ್ನು ಪುರಾಣಗಳಿಗೆ ಅನ್ವಯ ಮಾಡುತ್ತಾರೆ. ಮಿಥಾಲಜಿ ಎನ್ನುವುದನ್ನೇ ಮುಥೋಸ್ ಎಂದು ಕರೆಯುತ್ತಾರೆ. ಇದು ವಸ್ತುನಿಷ್ಟ ಸತ್ಯವನ್ನು ಹೇಳುವುದಿಲ್ಲ. ಸಮಾಜ ಮತ್ತು ಅದರ ಉಗಮವನ್ನು ಪುರಾಣದಲ್ಲಿ ಹುಡುಕುವ ಯತ್ನವನ್ನು ಇದು ಮಾಡುತ್ತದೆ. ಇದು ಸತ್ಯ ಕಥೆಯನ್ನು ಹೇಳದೆ ಇರುವುದರಿಂದ ಇದರ ಬಗ್ಗೆ ಕೆಲವು ವಾಗ್ವಾದಗಳೂ ಇವೆ. ಮಿಥೋಸ್ ಎಂದರೆ ಕಥನ ಮತ್ತು ವರದಿ ಎನ್ನುವ ಅರ್ಥವೂ ಇದೆ. ಕತೆಯನ್ನು ಹೇಳು ಎನ್ನುವುದು ಇದರ ಭಾವಾರ್ಥವಾಗಿದೆ. ಹಾಗೆಯೇ ಭಾಷಣ ಮತ್ತು ನಿರೂಪಣೆ ಎನ್ನುವುದನ್ನು ಇದು ಸೂಚಿಸುತ್ತದೆ. ಇದು ಒಂದು ಸಂಸ್ಕೃತಿಯ ನಂಬಿಕೆಯನ್ನು ಹೇಳುತ್ತದೆ. ಇದರಲ್ಲಿ ಅನೇಕ ಘಟನೆಗಳು ಇರುತ್ತವೆ. ಅದರಲ್ಲಿ ಭಿನ್ನತೆಗಳು ಇಲ್ಲ. ಯಾವುದನ್ನು ನಾವು ಕಥನ ಎಂದು ಹೇಳುತ್ತೇವೆಯೋ ಅದರಲ್ಲಿ ವಿವಿಧ ಘಟನೆಗಳು ಇರುತ್ತವೆ. ಅದಕ್ಕೆ ನಿಯಮಗಳು ಇರುತ್ತವೆ. ಆ ನಿಯಮವು ಸಾಹಿತ್ಯ ಮತ್ತು ಅದರ ಅಭಿವ್ಯಕ್ತಿಗೆ ಸಂಬಂಧಪಟ್ಟದ್ದೂ ಹೌದು. ಷಟ್ಪದಿ ಮತ್ತು ಚಂಪೂ ಕಾವ್ಯಗಳಲ್ಲಿ ಸಾಹಿತ್ಯ ಕಥನಗಳು ಇದ್ದವು. ಅವುಗಳಿಗೆ ಒಂದು ರೂಪವೂ ಇತ್ತು. ಅಪೂರ್ಣವಾದ ಕಥನ ಎನ್ನುವುದು ಇರಲಿಲ್ಲ. ಈಗಲೂ ನಾವು ಕತೆಯನ್ನು ಹೇಳುತ್ತೇವೆ. ಅದು ಅಪೂರ್ಣವಾಗಿದೆ ಎಂದು ಹೇಳಲಾಗುವುದಿಲ್ಲ. ಸಾಹಿತ್ಯ ಎಂದರೆ ಏನದು ಎನ್ನುವ ಪ್ರಶ್ನೆಯನ್ನು ಕೇಳಿದರೆ ಈವತ್ತು ಕೂಡಾ ನಾವು ಹಿಂದೆ ಏನು ಹೇಳಿದರೋ ಅದನ್ನೇ ಹೇಳುತ್ತೇವೆ. ವ್ಯಾಖ್ಯೆಗಳು ಹೆಚ್ಚು ಬದಲಾಗಿಲ್ಲ. ಸಾಹಿತ್ಯ ಪ್ರಕಾರಗಳು, ಸಾಹಿತ್ಯದ ರೂಪದ ಪ್ರಶ್ನೆಗಳಿಗೆ ನಾವು ಹಿಂದೆ ಏನು ಹೇಳಿದರೋ ಅದನ್ನೇ ಪ್ರತಿಪಾದಿಸುತ್ತೇವೆ. ಸ್ವಲ್ಪ ಬದಲಾವಣೆಯನ್ನು ಮಾಡಿದ್ದೇವೆ ಅಷ್ಟೇ. ಕೆಲವು ಸಾಹಿತ್ಯದ ರೂಪಗಳಿಗೆ ಹೆಚ್ಚು ಮನ್ನಣೆಯು ದೊರೆತಿದೆ. ಅದರಲ್ಲಿಯೂ ಈವತ್ತು ಕಾದಂಬರಿ ಪ್ರಕಾರವು ಹೆಚ್ಚು ಜನಪ್ರಿಯವಾಗಿದೆ. ಅದು ಆಧುನಿಕ ಕಾಲದ ಸೃಷ್ಟಿಯೂ ಹೌದು. ಹೊಸದಾದ ಸಾಮಾಜಿಕ ಸನ್ನಿವೇಶಕ್ಕೆ ಅನುಸಾರವಾಗಿ ಅದು ಇದೆ. ಅದರಲ್ಲಿ ನಾವು ನಮ್ಮ ಅನುಭವವನ್ನು ಹೇಳಬಹುದು. ಅದರ ಜೊತೆಗೆ ಅದರಲ್ಲಿ ನಮ್ಮ ಅಭಿವ್ಯಕ್ತಿಯನ್ನು ಸಾಧಿಸಬಹುದು. ಉಳಿದ ಪ್ರಕಾರಕ್ಕಿಂತ ಇದು ಭಿನ್ನವಾಗಿದೆ. ಕಾದಂಬರಿಯ ಸಂಯೋಜನೆಯು ಬೇರೆಯಾಗಿದೆ. ಕಾದಂಬರಿ ಮತ್ತು ಅದರ ಉದ್ದೇಶವೂ ಬೇರೆಯಾಗುತ್ತದೆ. ಬದಲಾಗುತ್ತಿರುವ ಸಮಾಜವನ್ನು ಹೇಳುವುದು ಭಿನ್ನವಾಗಿ ಸಮಾಜವು ಪಲ್ಲಟವಾಗುತ್ತಿದೆ ಎಂದು ಹೇಳಲು ಸಾಧ್ಯವಾಗುವುದು ಕೂಡಾ ಕಾದಂಬರಿಯಲ್ಲಿ, ಅದನ್ನು ನಾವು ಮುಸ್ಸಂಜೆಯ ಕಥಾ ಪ್ರಸಂಗದಲ್ಲಿ ಕಾಣುತ್ತೇವೆ. ಅದರಲ್ಲಿ ಮಹಾಕಾವ್ಯದ ಗುಣವಿದೆ., ಅದರಲ್ಲಿ ನಾಟಕದ ಅಂಶವೂ ಇದೆ. ಅದರಲ್ಲಿ ಅಭಿಜಾತ ಪರಂಪರೆಯು ಗುಣವೂ ಇದೆ. ಮುಸ್ಸಂಜೆಯ ಕಥಾ ಪ್ರಸಂಗದಲ್ಲಿ ನಾವು ಇದನ್ನು ಕಾಣುತ್ತೇವೆ. ಅರಿಸ್ಟಾಟಲನ ಪೊಯೆಟಿಕ್ಸ್ ಕೃತಿಯಲ್ಲಿ ಒಂದು ವಿಚಾರವು ಬರುತ್ತದೆ. ಅದು ಕ್ರಿಯೆ ಮತ್ತು ಅದರ ಐಕ್ಯತೆಯನ್ನು ಹೇಳುತ್ತದೆ. ನಿರೂಪಣೆಯ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ್ದು. ಯಾವುದನ್ನು ನಾವು ಚಾರಿತ್ರಿಕವಾದ ಮಹಾಕಾವ್ಯ ಎಂದು ಹೇಳುತ್ತೇವೆಯೋ ಅದರಲ್ಲಿ ಕ್ರಿಯೆ, ಕಾಲ ಮತ್ತು ವಸ್ತುವಿನ ಏಕತೆಯನ್ನು ನಾವು ಕಾಣುತ್ತೇವೆ. ಅವುಗಳಲ್ಲಿ ಕಾಲವು ಅತ್ಯಂತ ವಿಸ್ತಾರವಾಗಿರುತ್ತದೆ. ಕೃತಿಯ ಒಳಗಿನ ಕಾಲ ಮತ್ತು ಅದರ ನಿರೂಪಣೆಗೆ ಒಂದು ಸಂಬಂಧವು ಇದೆ.
ಚರಿತ್ರೆಯಲ್ಲಿ ನಾವು ಕೆಲವು ಪ್ರಾಚೀನ ಮಾದರಿಗಳನ್ನು ಕಾಣಬಹುದು. ಇದನ್ನು ಪ್ರೈ ಎನ್ನುವ ಚಿಂತಕ ಪ್ರಾಗ್ರೂಪ ಎಂದು ಕರೆಯುತ್ತಾನೆ. ವಿಶ್ವದ ಸಂಗತಿಗಳು ಎಲ್ಲಾ ಕಡೆಗೆ ಒಂದೇ ರೀತಿಯಲ್ಲಿ ಇರುತ್ತದೆ. ಯಾವುದನ್ನು ಅವನು ನಿಯಮ ಬದ್ಧವಾದ ರೂಪಗಳು ಎಂದು ಹೇಳುತ್ತಾನೆಯೋ ಅದರಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳು ಇರುತ್ತವೆ. ಜಗತ್ತಿನಲ್ಲಿ ಕೆಲವು ವಿಚಾರಗಳ ನಿರೂಪಣೆಯು ಒಂದೇ ರೀತಿಯಲ್ಲಿ ಇರುತ್ತವೆ. ಕಥನವನ್ನು ನಾವು ಒಂದೇ ಚಹರೆಯಲ್ಲಿ ಗುರುತಿಸುತ್ತೇವೆ. ಅದೇ ರೀತಿಯಲ್ಲಿ ಹಾಡುಗಳು ಕೂಡ ಒಂದು ಮಾದರಿಯಲ್ಲಿ ಇರುತ್ತದೆ. ನಾಟಕವು ದೃಶ್ಯಾತ್ಮಕವಾದ ಕಲೆಯು ಆಗಿದ್ದು, ಅದರಲ್ಲಿ ಹೆಚ್ಚು ಭಿನ್ನತೆಗಳಿರುವುದು ಸಾಧ್ಯವಿಲ್ಲ. ಇದಕ್ಕೆ ಕಾರಣವೂ ಸ್ಪಷ್ಟ. ಚರಿತ್ರೆಯು ಇದನ್ನು ಹೇಳುತ್ತದೆ. ಕಥನಗಳು ಮತ್ತು ಕಾದಂಬರಿಗಳು ಹಾಗೂ ಅವುಗಳ ಬೇರೆ ಬೇರೆ ಮಾದರಿಗಳು ಒಂದೇ ಮೂಲದಿಂದ ಬಂದಿರುತ್ತವೆ.

Q121

ಆಧುನಿಕ ಕಾಲದ ಪುರಾಣವೆಂದು ಯಾವುದನ್ನು ಕರೆಯುತ್ತಾರೆ ?

  1. (1) ಕಥೆ
  2. (2) ಕಾದಂಬರಿ
  3. (3) ಕಾವ್ಯ
  4. (4) ಸಿನಿಮಾ
See answer and solution
Q122

ಪುರಾಣದ ಕಥನದ ಶೈಲಿಯು ಯಾವುದಕ್ಕೆ ಅನ್ವಯ ಎಂದು ಇಲ್ಲಿ ಹೇಳಲಾಗಿದೆ ?

  1. (1) ಕಥೆ ಪುರಾಣ ಹೇಳಲು
  2. (2) ಗಮಕ ಮಾಡಲು
  3. (3) ಸಾಹಿತ್ಯ–ಅಭಿವ್ಯಕ್ತಿ
  4. (4) ಧಾರ್ಮಿಕ ಆಚರಣೆಯಲ್ಲಿ ಬಳಕೆ
See answer and solution
Q123

‘ಮುಸ್ಸಂಜೆಯ ಕಥಾ ಪ್ರಸಂಗ’ವನ್ನು ಬರೆದವರು :

  1. (1) ಪಿ. ಲಂಕೇಶ
  2. (2) ಅನಕೃ
  3. (3) ಅನಂತಮೂರ್ತಿ
  4. (4) ಶಿವರಾಮಕಾರಂತ
See answer and solution
Q124

‘ಅಭಿಜಾತ’–ಈ ಪದದ ಮೂಲ ಯಾವುದು ?

  1. (1) ಹಿಂದಿ
  2. (2) ಪರ್ಶಿಯನ್
  3. (3) ಕನ್ನಡ
  4. (4) ಸಂಸ್ಕೃತ
See answer and solution
Q125

ನಾಟಕಕ್ಕೆ ‘ಪ್ರಾಚೀನ ಮಾದರಿ’ಯ ಪರಿಕಲ್ಪನೆಯು ಅನ್ವಯವಾಗುತ್ತದೆಯೇ ?

  1. (1) ಅನ್ವಯವಾಗುತ್ತದೆ
  2. (2) ಕೆಲವು ಬಾರಿ ಆಗುತ್ತದೆ
  3. (3) ನಿಯತವಾಗಿ ಅಲ್ಲ
  4. (4) ಅನ್ವಯವಾಗುವುದಿಲ್ಲ
See answer and solution
Q126

ಮಿಥಾಲಜಿಯನ್ನು ಕನ್ನಡದಲ್ಲಿ ಏನೆಂದು ಕರೆಯುತ್ತಾರೆ ?

  1. (1) ಪುರಾಣ
  2. (2) ದಂತಕಥೆ
  3. (3) ಧಾರ್ಮಿಕ ಕಥೆ
  4. (4) ಕಥನ
See answer and solution
Q127

ಪುರಾಣಗಳು ಏನನ್ನು ಹೇಳುತ್ತವೆ ?

  1. (1) ಮನುಷ್ಯರ ಕಥೆಗಳನ್ನು
  2. (2) ಕಾಲ್ಪನಿಕ ಕಥೆಗಳನ್ನು
  3. (3) ರಮ್ಯ ಶೈಲಿಯ ಕಥೆಯನ್ನು
  4. (4) ಸಂಸ್ಕೃತಿಯ ನಂಬಿಕೆಯನ್ನು
See answer and solution
Q128

‘ಪ್ರತಿಪಾದಿಸು’ – ಈ ಪದದ ಅರ್ಥ :

  1. (1) ಉಲ್ಲೇಖಿಸು
  2. (2) ನಿಶ್ಚಯಿಸು
  3. (3) ಪ್ರಚುರ ಪಡಿಸು
  4. (4) ವಾದಿಸು
See answer and solution

Passage

ನಿರ್ದೇಶನ : ಈ ಕೆಳಗಿನ ಲೇಖನ ಭಾಗವನ್ನು ಓದಿ, ಅನುಸರಿಸಿ ಬರುವ ಪ್ರಶ್ನೆಗಳಿಗೆ (ಪ್ರಶ್ನೆ ಸಂಖ್ಯೆ : 129-135) ಸೂಕ್ತ ಉತ್ತರವನ್ನು ಆರಿಸುವುದರ ಮೂಲಕ ಉತ್ತರಿಸಿ.
ಇನ್ನೂ ಕತ್ತಲು ಪೂರ್ತಿ ಕರಗಿರಲಿಲ್ಲ, ಪಾಟೀಲರು ನಿಧಾನವಾಗಿ ಕೋಣೆಯಿಂದ ಪಡಸಾಲೆಗೆ ಬಂದು ಕುರ್ಚಿಯಲ್ಲಿ ಕುಳಿತರು. ಬದಿಯ ಟೇಬಲಿನ ಮೇಲೆ ಜೇನುತುಪ್ಪ, ನಿಂಬೇರಸ ಬೆರೆಸಿದ ಪಾನಕ ತುಂಬಿದ್ದ ತಂಬಿಗೆಯಿತ್ತು. ರೂಢಿಯಂತೆ ಎತ್ತಿಕೊಂಡು ಕುಡಿಯತೊಡಗಿದರು. ಒಂದೆರಡು ಗುಟುಕು ಕುಡಿದಿರಬೇಕು. ರುಚಿಗೆ ಮನಸ್ಸು ಉತ್ಸಾಹಗೊಂಡಿತು. ಹತ್ತಾರು ವರ್ಷಗಳಿಂದ ಆಪ್ತರಾಗಿದ್ದ ಆಯುರ್ವೇದ ವೈದ್ಯರೊಬ್ಬರು ಇಂಥ ಪಾನಕ ಕುಡಿಯಲು ಹೇಳುತ್ತಲೇ ಇದ್ದರು. ಆದರೆ ಮುಂಜಾನೆ ಎದ್ದರೆ ಸಾಕು ಮನಸ್ಸು ಚಹಾಕ್ಕೆ ಹಾತೊರೆಯುತ್ತಿತ್ತು. ಚಹ ಕುಡಿದರೆ ಮಾತ್ರ ಸಮಾಧಾನವಾಗುತ್ತಿತ್ತು. ಒಂದೆರಡು ಸಲ ಪಾನಕ ಕುಡಿಯಲು ಯತ್ನಿಸಿ ಕುಡಿದರೂ, ಪುನಃ ಚಹ ಕುಡಿಯುವ ತನಕ ಮನಸ್ಸಿಗೆ ನೆಮ್ಮದಿಯಾಗಿರಲಿಲ್ಲ! ಹೀಗಾಗಿ ಜೇನುತುಪ್ಪ ನಿಂಬೇರಸದ ಪಾನಕ ಕುಡಿಯಬೇಕೆಂಬ ಪ್ರಯತ್ನ ಕೈಬಿಟ್ಟಿದ್ದರು. ಪಾಟೀಲರು ಈ ಮನೆಗೆ ಬಂದು ಒಂದು ವಾರ ಕಳೆದಿತ್ತು. ಇಲ್ಲಿ ಪಾನಕ ಕುಡಿಯುವುದು ಅನಿವಾರ್ಯವಾಗಿ ರೂಢಿಯಾಗಿತ್ತು. ಈಗ ಪಾನಕ ಕುಡಿಯುತ್ತಿದ್ದರೆ ತನು ಮನಕ್ಕೆ ಹಿತವಾಗುತ್ತಿತ್ತು. ಪಾನಕವನ್ನು ಸವಿಯತೊಡಗಿದ್ದರು. ಕಳೆದ ಹದಿನೈದು ವರ್ಷಗಳಿಂದ ಜೀವಕ್ಕೆ ನೆಮ್ಮದಿ ಸಿಕ್ಕಿದ್ದು ಏನಾದರು ಇದ್ದರೆ ಅದು ಕಳೆದ ಈ ವಾರ–ಹತ್ತು ದಿನಗಳಲ್ಲಿ ಮಾತ್ರ ಎಂದು ಎನ್ನಿಸತೊಡಗಿತು. ಈ ಮನೆಯ ಸಿದ್ರಾಮಪ್ಪ ಮಾಸ್ತರ, ಹೆಂಡತಿ ಅಮರಮ್ಮ ದಂಪತಿಗಳು ಬದುಕುತ್ತಿರುವ ವಿಧಾನ ಕಂಡು ಪರಮಾಶ್ಚರ್ಯವಾಗಿತ್ತು. ಪಾಟೀಲರಿಗೆ. ಈ ಒಂಟಿ ಮನೆಗೆ ಬಂದ ದಿನ ರಾತ್ರಿವಾಸದ ಅನುಭವದಿಂದ, ಯಾವ ಶಿಕ್ಷೆಯ ಪರಿಣಾಮವಾಗಿ ಈ ದಂಪತಿಗಳು ಈ ರೀತಿಯಲ್ಲಿ ಜೀವಿಸುತ್ತಿದ್ದಾರೆ ಎಂದು ಅನ್ನಿಸಿ ಪಾಟೀಲರಿಗೆ ಬೇಸರವಾದದ್ದು ನಿಜ ಆದರೆ ಮೂರು ದಿನ ಕಳೆಯುವ ಹೊತ್ತಿಗೆ ‘ಆಹ್ಹಾ! ಅನ್ನಿಸಿಬಿಟ್ಟಿತು. ಮಾಸ್ತಾರರು ಕುಟುಂಬದ ಜತೆಗೆ ಮಾಡುತ್ತಿದ್ದ ನಿತ್ಯದ ಕೆಲಸಗಳನ್ನು ನೋಡುತ್ತಿದ್ದರೆ, ಮಕ್ಕಳು ಕೂಡಿಕೊಂಡು ಗಂಡ–ಹೆಂಡತಿಯ ಸಂಸಾರದ ಆಟ ಆಡುತ್ತವಲ್ಲ .... ಅದನ್ನು ಕಂಡಂತಿತ್ತು. ಮಾಸ್ತಾರರೇ ಹುಟ್ಟಿ ಬೆಳೆದ ಈ ಊರಲ್ಲಿ ಇರದೆ ಇದೇ ಊರಿನ ಹೊರಗೆ ಹೊಲದಲ್ಲಿ ಮನೆ ಕಟ್ಟಿಕೊಂಡು ಇದ್ದರು. ಹೊತ್ತು ಮುಳುಗಿದ ಬೆನ್ನಲ್ಲೇ ಉಣ್ಣುವುದು, ಉಂಡು ಕಂದೀಲು ಬೇಳಕಿನಲ್ಲಿ ಕುಳಿತು ಮಾತುಕತೆಯಾಡುವುದು, ಮನೆಯ ಹೊರಗೆ ಬೆಳದಿಂಗಳಲ್ಲಿ ಸುತ್ತಾಡಿ ಬಂದು ಮಲಗುವುದು. ಬೆಳಗಾಗುವ ಮುನ್ನವೇ ಏಳುವುದು, ಕಟ್ಟಿಕೊಂಡಿರುವ ಆಕಳು, ಅದರ ಅಂಕಣವನ್ನು ಹಸನ ಮಾಡುವುದು, ಹಾಲು ಹಿಂಡಿಕೊಳ್ಳುವುದು, ಮನೆಯ ಸುತ್ತಮುತ್ತಲಿನ ತೋಟವನ್ನು ಸುತ್ತಾಡಿ ಆರೈಕೆ ಮಾಡುವುದು, ಪಕ್ಕದ ಕಾಲುವೆಯಲ್ಲಿ ಬಟ್ಟೆಬರೆ ಒಗೆಯುವುದು ಒಂದೇ ಎರಡೇ ಇಂಥ ಹಲವು ಕೆಲಸಗಳನ್ನು ದಣಿವಿಲ್ಲದೆ, ಬೇಸರಿಸದೆ ಇಬ್ಬರು ಕೂಡಿಯೇ ಮಾಡುವುದನ್ನು ಪಾಟೀಲರು ಕಂಡು ತಾವು ಕೈ ಜೋಡಿಸಲು ಹಂಬಲಿಸಿದರು. ಮೊನ್ನೆ ಮಾಸ್ತಾರರು ಕಾಲುವೆಯಲ್ಲಿ ಬಟ್ಟೆ ಒಗೆಯುತ್ತಿದ್ದಾಗ ಹೆಂಡತಿಯ ಸೀರೆ ಬಟ್ಟೆಗಳೂ ಕಂಡು ತಡೆಯಲಾರದೆ ಪಾಟೀಲರು, ‘ಸಿದ್ರಾಮು, ಸೀರೆ ಒಗೆಯುವುದು ನಿನಗೆ ಹೇಗೆ ಸಾಧ್ಯವಾಯ್ತು ? ಅದಕ್ಕೂ ಮಾನಸಿಕ ಸಿದ್ಧತೆ ಬೇಕಲ್ಲ ? ತಪ್ಪು ತಿಳಿಯಬಾರದು.....’ ಎಂಬ ಮಾತು ಮುಗಿಯುವ ಮುನ್ನವೇ, ತಪ್ಪಾಕ ತಿಳಿಲಿ ಬಿಡು, ನಾನು ಉಡುವುದು ಪಂಜೆ, ಆಕೆ ಉಡುವುದು ಸೀರೆ, ಅವೆಲ್ಲ ಬಟ್ಟೆಗಳಲ್ಲೇನಪ್ಪ ? ಬಟ್ಟೆಗಳಂತ ಒಗಿತೀನಿ ಅಷ್ಟೆ! ಎಂದು ಮಾಸ್ತರರು ತಣ್ಣಗೆ ಅಂದಿದ್ದರು. ಮಾತು ಪಾಟೀಲರಿಗೆ ತಗುಲಿತು. ತಮ್ಮ ಹೆಂಡತಿಯನ್ನು ನೆನಪಿಸಿಕೊಂಡಿದ್ದರು. ಬಾತ್ ರೂಮಿಗೆ ಸ್ನಾನಕ್ಕೆ ಹೋದಾಗ, ಅಲ್ಲೇನಾದರೂ ಹೆಂಡತಿಯ ಬಟ್ಟೆ ಬರೆ ಕಾಣಿಸಿದರೆ ಸಿಡಿಮಿಡಿಯಾಗುತ್ತಿತ್ತು. ಅದನ್ನು ಪಾಟೀಲರು ಕಣ್ಣ ಮುಂದೆ ತಂದುಕೊಂಡರು...
“ನಿಮ್ಗ ಈ ಪಾನಕ ಬ್ಯಾಡನಿಸಿದರೆ ಬುಟ್ಟು ಬುಡ್ರಿ, ಹಾಲು ತಂದು ಕೊಡ್ತೀನಿ” ಅಂದಳು. ಅಡಿಗೆ ಮನೆಯಿಂದ ಪಡಸಾಲೆಗೆ ಬಂದ ಅಮರಮ್ಮ, ಏನನ್ನೋ ನೆನೆಯುತ್ತ ಕೈಯಲ್ಲಿ ಪಾನಕದ ತಂಬಿಗೆ ಹಿಡಿದು ಕುಳಿತಿದ್ದ ಪಾಟೀಲರನ್ನು ಅನುಮಾನಿಸಿ ಕೇಳಿದ್ದಳು.

Q129

ಪಾಟೀಲರು ಸ್ಥಂಭೀಭೂತರಾದದ್ದು ಯಾವಾಗ ?

  1. (1) ಹೆಣ್ಣುಮಕ್ಕಳ ಬಟ್ಟೆಯನ್ನು ಸಿದ್ರಾಮಪ್ಪನ ಒಗೆಯತೊಡಗಿದಾಗ
  2. (2) ಬಟ್ಟೆ ಒಗೆಯುವ ಸಿದ್ರಾಮಪ್ಪನ ನೋಡಿ
  3. (3) ಸಿದ್ರಾಮಪ್ಪನ ಅಡಿಗೆಮನೆ ಕೆಲಸವನ್ನು ನೋಡಿ
  4. (4) ಸಿದ್ರಾಮಪ್ಪ ಹೆಂಡತಿಯ ಸೀರೆಯನ್ನು ಒಗೆಯತೊಡಗಿದಾಗ
See answer and solution
Q130

ಪಾಟೀಲರು ಮೊದಲಿಗೆ ಇದ್ದ ರೀತಿ ಯಾವುದು ?

  1. (1) ಗಂಡುದರ್ಪದಲ್ಲಿ
  2. (2) ವಿನಯಶೀಲರಾಗಿ
  3. (3) ಸಿಡುಕು ಮನಸ್ಸಿನವರಾಗಿ
  4. (4) ನಿಯಮಬದ್ಧ ಗಂಡನಾಗಿ
See answer and solution
Q131

ಏನನ್ನು ನೋಡಿ ಪಾಟೀಲರ ಮನಸ್ಸು ಪರಿವರ್ತನೆ ಆಯಿತು ?

  1. (1) ಅಧ್ಯಯನಶೀಲ ಮಾಸ್ತರ ಸಿದ್ರಾಮಪ್ಪ ಅವರನ್ನು ನೋಡಿ
  2. (2) ಸಿದ್ರಾಮಪ್ಪ ಮಾಸ್ತರ, ಅಮರಮ್ಮ ದಂಪತಿಗಳನ್ನು ನೋಡಿ
  3. (3) ಸಿದ್ರಾಮಪ್ಪ ಅವರ ಹೆಂಡತಿಯ ಕೆಲಸವನ್ನು ನೋಡಿ
  4. (4) ಪ್ರಕೃತಿಯ ಸಹಜತೆಯನ್ನು ನೋಡಿ
See answer and solution
Q132

‘ಅವೆಲ್ಲ ಬಟ್ಟೆಗಳಲ್ಲವೇನಪ್ಪ, ಬಟ್ಟೆಗಳಂತ ಒಗಿತೀನಿ’ ಈ ಮಾತು ಮತ್ತು ಕ್ರಿಯೆಯ ಹಿಂದೆ ಬರುವ ಭಾವ :

  1. (1) ಎಲ್ಲರೂ ಸಮಾನರು
  2. (2) ಮೇಲು ಕೀಳು ಮಾಡಬಾರದು
  3. (3) ಬಟ್ಟೆಗಳು ಒಂದೇ ರೀತಿಯವು
  4. (4) ಬಟ್ಟೆಗಳಲ್ಲಿ ವ್ಯತ್ಯಾಸವಿಲ್ಲ
See answer and solution
Q133

‘ಕತ್ತಲು ಕರಗು’ – ಈ ನುಡಿಗಟ್ಟಿನ ಅರ್ಥವೇನು ?

  1. (1) ಪ್ರಖರ ಬೆಳಕು
  2. (2) ಸಂಜೆಯಾಗು
  3. (3) ಬೆಳಗಾಗು
  4. (4) ದಟ್ಟ ರಾತ್ರಿ
See answer and solution
Q134

ಪಾಟೀಲರಿಗೆ ಮುಂಜಾನೆ ಎದ್ದ ಕೂಡಲೇ ಏನು ಬೇಕು ಅನಿಸುತ್ತದೆ ?

  1. (1) ನಿಂಬೆರಸ
  2. (2) ನೀರು
  3. (3) ಕಾಫಿ
  4. (4) ಚಹಾ
See answer and solution
Q135

‘ಸಿಡಿ–ಮಿಡಿ’ – ಈ ಪದಗಳನ್ನು ಏನೆಂದು ಕರೆಯುತ್ತಾರೆ ?

  1. (1) ಅನುಕರಣ ಪದಗಳು
  2. (2) ಜೋಡು ಪದಗಳು
  3. (3) ದ್ವಿರುಕ್ತಿ ಪದಗಳು
  4. (4) ಅನುರಣನ ಪದಗಳು
See answer and solution
Q136

ವಿಷಯಕ್ಕೆ ಸಂಬಂಧಿಸಿದಂತೆ, ಪ್ರಸ್ತುತವಾದ ವಿಡೀಯೊ ಅನ್ನು ಹುಡುಕಿ ಅಧ್ಯಾಪಕಿಯು ಜೋಡಿ ಕೆಲಸದ ವಿದ್ಯಾರ್ಥಿಗಳ ಚಟುವಟಿಕೆಯನ್ನು ಮಾಡಿಸುತ್ತಾಳೆ. ವಿದ್ಯಾರ್ಥಿಗಳು ಜೋಡಿಯಾಗಿ ಮಾಡುವ ಈ ಚಟುವಟಿಕೆಯು ವಿದ್ಯಾರ್ಥಿಗಳನ್ನು ಈ ದೃಷ್ಟಿಯಿಂದ ಉತ್ತೇಜಿಸುತ್ತದೆ :

  1. (1) ಜೊತೆಗೂಡಿ ವೇಗವಾಗಿ ಕೆಲಸ ಮಾಡುವಂತೆ ಪ್ರೇರೇಪಣೆ
  2. (2) ಶಿಕ್ಷಕರನ್ನು ಬಿಟ್ಟು ಸ್ವಂತವಾಗಿ ಕೆಲಸ ಮಾಡಲು ಪ್ರೇರೇಪಣೆ
  3. (3) ಭಾಷಾ ತಿಳುವಳಿಕೆಯನ್ನು ಹೆಚ್ಚಿಸುವುದು
  4. (4) ಅವರ ಸ್ವಂತ ಚಟುವಟಿಕೆಯನ್ನು ಮೌಲ್ಯಮಾಪನ ಮಾಡಿಕೊಳ್ಳುವುದು
See answer and solution
Q137

ಭಾಷಾ ಕಲಿಕೆಯಲ್ಲಿ ಸಣ್ಣ ಕಥೆಗಳು ಹಾಗೂ ಇತರ ಕಥನಗಳನ್ನು ಸಹಾಯಕ ಓದಿಗೆಂದು ಇಡಲಾಗಿದೆ. ಸಹಾಯಕ ಓದಿನ ಪ್ರಮುಖ ಉದ್ದೇಶವೇನು ?

  1. (1) ತೀವ್ರ ಓದನ್ನು ಬೆಳೆಸುವುದು
  2. (2) ನೈತಿಕ ಕಲಿಕೆಯನ್ನು ಬೆಳೆಸುವುದು
  3. (3) ತೀವ್ರವಾದ ಹೊರ ಓದನ್ನು ಬೆಳೆಸುವುದು
  4. (4) ಬಹುಭಾಷಿಕತ್ವವನ್ನು ಬೆಳೆಸುವುದು
See answer and solution
Q138

ಹೇಳಿಕೆ (A) : ಪರಿಹಾರಾತ್ಮಕ ಬೋಧನೆ (Remedial) ಯು ಕಲಿಸುವಿಕೆ–ಕಲಿಯುವಿಕೆಯ ಪ್ರಕ್ರಿಯೆಯು ಅಂತರ್ಗತ ಭಾಗವಾಗಿದೆ.
ಕಾರಣ (R) : ಪರಿಹಾರಾತ್ಮಕ ಬೋಧನೆ ಅಂದರೆ ಮತ್ತೆ ಬೋಧಿಸುವುದು, ಆದರೆ ವಿದ್ಯಾರ್ಥಿಗಳು ಸರಿಯಾಗಿ ಕಲಿಯದೇ ಇರುವ ಭಾಷಾ ವಿವರಗಳನ್ನು ಅದೇ ಬಗೆಯಲ್ಲೇ ಕಲಿಯಬೇಕೆಂದಿಲ್ಲ.
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

  1. (1) (A) ಮತ್ತು (R) ಎರಡೂ ಸರಿ, ಆದರೆ (R) ಅನ್ನುವುದು (A) ಯ ಸರಿಯಾದ ವಿವರಣೆ ಅಲ್ಲ.
  2. (2) (A) ಸರಿಯಾಗಿದೆ, ಆದರೆ (R) ತಪ್ಪು.
  3. (3) (A) ತಪ್ಪು, ಆದರೆ (R) ಸರಿಯಾಗಿದೆ.
  4. (4) (A) ಮತ್ತು (R) ಎರಡೂ ಸರಿ, ಮತ್ತು (R) ಅನ್ನುವುದು (A) ಯ ಸರಿಯಾದ ವಿವರಣೆಯಾಗಿದೆ.
See answer and solution
Q139

ವಿದ್ಯಾರ್ಥಿಯಿಂದ ತಾನು ಓದಿದ ಕಥೆಯನ್ನು ಮತ್ತೆ ಅವನ/ಅವಳ ಪದಗಳಲ್ಲಿ ಹೇಳುವುದು ಈ ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತವೆ :

  1. (1) ನಿರರ್ಗಳತೆ
  2. (2) ಅರಿತುಕೊಳ್ಳುವಿಕೆ
  3. (3) ನೆನಪು
  4. (4) ನಿಖರತೆ
See answer and solution
Q140

ಭಾಷಾ ಕಲಿಕೆಯಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಸರಿಯಲ್ಲದ ಊಹೆ ?

  1. (1) ಕಲಿಯುವಲ್ಲಿ ಕಲಿಯುವವರ ಮೊದಲನೇ ಭಾಷೆ ಮಹತ್ವದ ಪಾತ್ರ ವಹಿಸುತ್ತದೆ.
  2. (2) ಭಾಷಾ ಕಲಿಕೆಯು ಸಂವಹನ ಚಟುವಟಿಕೆಗಳಿಗೆ ಕೇಂದ್ರೀಕರಿಸಬೇಕು.
  3. (3) ಭಾಷಾ ಕಲಿಕೆಯು ಭಾಷೆಗಿಂತ ಬರಹಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು.
  4. (4) ನಿಜವಾದ ಸಂದರ್ಭಗಳಲ್ಲಿ ಬಳಕೆ ಮಾಡುವ ಪ್ರಯತ್ನದ ಮೂಲಕ ಕಲಿಯುವವರು ಭಾಷೆಯನ್ನು ಸಾಧಿಸುತ್ತಾರೆ.
See answer and solution
Q141

ಈ ಕೆಳಗಿನವುಗಳಲ್ಲಿ ಯಾವುದು ಭಾಷೆಯ ಪ್ರಮುಖ ಜವಾಬ್ದಾರಿ ?

  1. (1) ಕಲಿಸಲು ವಿಷಯವನ್ನು ಆಯ್ಕೆ ಮಾಡುವುದು
  2. (2) ಕಲಿಯುವವರನ್ನು ವಿಭಿನ್ನ ತರಗತಿಗಳಿಗೆ ಗುಂಪು ಮಾಡುವುದು
  3. (3) ಕಲಿಯುವವರಿಗೆ ಸೂಚನೆ ಕೊಡುವುದು
  4. (4) ಕಲಿಯುವವನ ಸಂವಹನದ ಆವಶ್ಯಕತೆಯನ್ನು ಗುರುತಿಸುವುದು
See answer and solution
Q142

ಮೊದಲ ಘಟ್ಟದಲ್ಲಿ ಮಕ್ಕಳು ಈ ರೀತಿಯಲ್ಲಿ ಕಲಿಯುವುದು ಶ್ರೇಷ್ಠ ಮತ್ತು ಅನುಕೂಲ :

  1. (1) ಕಛೇರಿಯ ಭಾಷೆಯಲ್ಲಿ
  2. (2) ಮನೆ ಭಾಷೆಯಲ್ಲಿ
  3. (3) ಇಂಗ್ಲಿಷ್ ಮಾಧ್ಯಮದಲ್ಲಿ
  4. (4) ಕಲಿಕಾ ಮಾಧ್ಯಮದಲ್ಲಿ
See answer and solution
Q143

ಮಕ್ಕಳಿಗೆ ಕಥೆ ಹೇಳುವುದಕ್ಕೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಲ್ಲ ?

  1. (1) ವಾಕ್ಯ ರಚನೆಯನ್ನು ಕಲಿಯುವುದು
  2. (2) ಸಮಸ್ಯೆ ಪರಿಹಾರದ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸುವುದು
  3. (3) ಜೀವನದಲ್ಲಿ ಅನುಸರಿಸುವುದಕ್ಕೆ ಹೊಸ ನೈತಿಕ ಮೌಲ್ಯಗಳನ್ನು ಕಲಿಯುವುದು
  4. (4) ಹೊಸ ಪದಗಳನ್ನು ಕಲಿತು ಅವರ ಶಬ್ದ ಸಂಪತ್ತನ್ನು ಬೆಳೆಸಿಕೊಳ್ಳುವುದು
See answer and solution
Q144

ಭಾಷಾ ಚಟುವಟಿಕೆಯ ಶಿಕ್ಷಕಿಯು ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳ ಗುಂಪನ್ನು ಮಾಡುತ್ತಾಳೆ. ಈ ವಿಭಿನ್ನ ಸಾಮರ್ಥ್ಯದಿಂದ ಕೂಡಿದ ಗುಂಪನ್ನು ಮಾಡುವ ಉದ್ದೇಶ :

  1. (1) ವಿದ್ಯಾರ್ಥಿಗಳಿಗೆ ಸ್ವತಂತ್ರವಾಗಿ ಹೇಳಲು ಅವಕಾಶ ಮಾಡುವುದು
  2. (2) ವಿದ್ಯಾರ್ಥಿಗಳು ಇನ್ನೊಬ್ಬರಿಗೆ ಸಹಾಯ ಮಾಡುವುದನ್ನು ಉತ್ತೇಜಿಸುವುದು
  3. (3) ಅಧ್ಯಾಪಕಿಯು ಎಲ್ಲರ ಕಡೆ ಗಮನ ಕೊಡಲು ಸಾಧ್ಯವಿಲ್ಲ ಆದ್ದರಿಂದ ಅವಳ ಹೊರೆಯನ್ನು ಕಡಿಮೆ ಮಾಡುವುದು
  4. (4) ಜಾಣನಲ್ಲದ ವಿದ್ಯಾರ್ಥಿಯನ್ನು ಗುರುತಿಸುವುದು
See answer and solution
Q145

ಮಕ್ಕಳನ್ನು ಭಾಷೆಯ ಕೆಳಗಿನ ಈ ಸ್ವರೂಪಕ್ಕೆ ಅವಕಾಶ ಮಾಡಿಕೊಡಬೇಕು ಮತ್ತು ಅದರಲ್ಲಿ ಸಂಲಗ್ನವಾಗುವ ಹಾಗೆ ಮಾಡಬೇಕು :

  1. (1) ಮೊದಲ ವಯಸ್ಸಿನಿಂದಲೇ ಎರಡು ಬರಹದ ಭಾಷೆಗಳಿಗೆ
  2. (2) ಚಿಕ್ಕಂದಿನಿಂದಲೇ ಅನೇಕ ಮೌಖಿಕ ಭಾಷೆಗಳಿಗೆ
  3. (3) ಚಿಕ್ಕಂದಿನಿಂದಲೇ ಅನೇಕ ಬರಹದ ಭಾಷೆಗಳಿಗೆ
  4. (4) ಮೊದಲ ವಯಸ್ಸಿನಿಂದಲೇ ಎರಡು ಮೌಖಿಕ ಭಾಷೆಗಳಿಗೆ
See answer and solution
Q146

ಹೇಳಿಕೆ (A) : ಮೊದಲ ಸಾಕ್ಷರತೆಯಲ್ಲಿ ಚಿತ್ರ ಬರೆಯುವುದು ಬರೆಯುವದರ ಪ್ರಾರಂಭವಾಗಿದೆ.
ಕಾರಣ (R) : ಚಿತ್ರಗಳು ಸಂಕೇತಗಳಾಗಿದ್ದು ಅರ್ಥವನ್ನು ಹೇಳುತ್ತಿರುತ್ತವೆ.
ಈ ಕೆಳಗಿನವುಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ.

  1. (1) (A) ಮತ್ತು (R) ಸರಿ, ಆದರೆ (R) ಅನ್ನುವುದು (A) ಯ ಸರಿಯಾದ ವಿವರಣೆ ಅಲ್ಲ.
  2. (2) (A) ಸರಿ, ಆದರೆ (R) ತಪ್ಪು.
  3. (3) (A) ತಪ್ಪು, ಆದರೆ (R) ಸರಿ ಇದೆ.
  4. (4) (A) ಮತ್ತು (R) ಸರಿ, ಮತ್ತು (R) ಅನ್ನುವುದು (A) ಯ ಸರಿಯಾದ ವಿವರಣೆ.
See answer and solution
Q147

‘ಕನಿಷ್ಟ ಜೋಡಿ’ ಅಭ್ಯಾಸವು ಈ ಕೆಳಗಿನದನ್ನು ಚೆನ್ನಾಗಿ ಮಾಡಲು ಪರಿಣಾಮಕಾರಿಯಾದ ವಿಧಾನವಾಗಿದೆ :

  1. (1) ಶಬ್ದ ಸಂಪತ್ತು
  2. (2) ಉಚ್ಛಾರ
  3. (3) ಬರಹಗುಚ್ಛವನ್ನು ಓದುವುದು
  4. (4) ವ್ಯಾಕರಣ
See answer and solution
Q148

ಭಾಷೆಯ ಗಳಿಕೆಯ ವರ್ತನಾತ್ಮಕ ತತ್ವಕ್ಕೆ (Behaviorist theory) ಈ ಕೆಳಗಿನವುಗಳಲ್ಲಿ ಯಾವುದು ಸಂಬಂಧಿಸಿದ್ದಲ್ಲ ?

  1. (1) ಖಾಲಿ ಪಾತ್ರೆ (Empty vessel)
  2. (2) ಟ್ರಯಲ್ ಅಂಡ್ ಎರರ್
  3. (3) ಸಾಮಾಜಿಕ ಸಂವಹನ
  4. (4) ವರ್ತನಾಶೀಲ ಸ್ಥಿತಿ (Operant condition)
See answer and solution
Q149

ಐದನೆಯ ತರಗತಿಯ ಅಧ್ಯಾಪಕಿಯು ಕಥೆಯನ್ನು ಬರೆಯುವ ಕೆಲಸವನ್ನು ವಿದ್ಯಾರ್ಥಿಗಳಿಗೆ ಕೊಡುತ್ತಾಳೆ. ಅವರು ಬರೆಯುತ್ತಿರುವಾಗ ಅಧ್ಯಾಪಕಿ ಕ್ಲಾಸಿನಲ್ಲಿ ಓಡಾಡುತ್ತ ತಪ್ಪು ಮಾಡುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿರುತ್ತಾಳೆ, ಅಥವಾ ಹೊಸ ಶಬ್ದಗಳನ್ನು ಕೇಳುತ್ತಾಳೆ.
ಇಲ್ಲಿ ಅಧ್ಯಾಪಿಕೆಯ ಪಾತ್ರ :

  1. (1) ಪ್ಲಾನರ್
  2. (2) ಫೆಸಿಲಿಟೇಟರ್ (ಸೌಲಭ್ಯ ಕಲ್ಪಿಸುವ)
  3. (3) ಕಂಡುಹಿಡಿಯುವವಳು (Diagnoticism)
  4. (4) ಮ್ಯಾನೇಜರ್
See answer and solution
Q150

ಹೇಳಿಕೆ (A) : ಓದುವುದು ಅಂದರೆ ಪದವನ್ನು ಸರಿಯಾಗಿ ಉಚ್ಛರಿಸುವುದಕ್ಕಿಂತ ಹೆಚ್ಚಿನದು.
ಕಾರಣ (R) : ಓದುವುದು ಅಂದರೆ ನಿಸ್ಸಂಕೇತಗೊಳಿಸುವುದು (Decoding).
ಈ ಕೆಳಗಿನವುಗಳಲ್ಲಿ ಸರಿಯಾದ ಆಯ್ಕೆಯನ್ನು ಮಾಡಿ.

  1. (1) (A) ಮತ್ತು (R) ಎರಡೂ ಸರಿ, ಆದರೆ (R) ಅನ್ನುವುದು (A) ಯ ಸರಿಯಾದ ವಿವರಣೆ ಅಲ್ಲ.
  2. (2) (A) ಸರಿಯಾಗಿದೆ, ಆದರೆ (R) ತಪ್ಪು.
  3. (3) (A) ತಪ್ಪು, ಆದರೆ (R) ಸರಿ ಇದೆ.
  4. (4) (A) ಮತ್ತು (R) ಎರಡೂ ಸರಿ, ಮತ್ತು (R) ಅನ್ನುವುದು (A) ಯ ಸರಿಯಾದ ವಿವರಣೆಯಾಗಿದೆ.
See answer and solution