By signing in you confirm you are 18 or older, or have your parent’s or guardian’s consent.

CTET 8 Feb 2026 Paper 1 Kannada, Question 103

Topic: Vocabulary

Passage

ನಿರ್ದೇಶನ : ಈ ಕೆಳಗಿನ ಕವನವನ್ನು ಓದಿ, ಅನುಸರಿಸಿ ಬರುವ ಪ್ರಶ್ನೆಗಳಿಗೆ (ಪ್ರಶ್ನೆ ಸಂಖ್ಯೆ : 100-105) ಸೂಕ್ತ ಉತ್ತರವನ್ನು ಆರಿಸುವುದರ ಮೂಲಕ ಉತ್ತರಿಸಿ.
ನಿಮ್ಮೊಡನಿದ್ದೂ ನಿಮ್ಮಂತಾಗದೆ ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ, ಈ ನೆಲದಲ್ಲಿ ಬೇರೊತ್ತಿದರೂ ಬೀಗಿ
ಪರಕೀಯನಾಗಿ ತಲೆಯೆತ್ತುವುದಿದೆ ನೋಡಿ
ಅದು ಬಲುಕಷ್ಟದ ಕೆಲಸ.
ವೃತ್ತದಲ್ಲಿ ಉನ್ಮತ್ತರಾದ
ನಿಮ್ಮ ಕುಡಿತ ಕುಣಿತ ಕೂಟಗಳು ಕೆಣಕಿ
ಕುಣಿಕೆ ಎಸೆದಿದ್ದರೂ
ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ :
ಸಂಯಮವನ್ನೇ ಪೋಷಿಸಿ ಸಾಕುತ್ತ
ರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.

Q103

‘ಉನ್ಮತ್ತ’ – ಈ ಪದದ ಅರ್ಥ :

  1. (1) ಬುದ್ಧಿ ಭ್ರಮಣೆCorrect answer
  2. (2) ಆವೇಶ
  3. (3) ಅತಿ ಎತ್ತರ
  4. (4) ಸಿಟ್ಟಾಗು

Solution.

CBSE answer: (1)

ಉತ್ತರ: (1) ಬುದ್ಧಿ ಭ್ರಮಣೆ

  1. ‘ಉನ್ಮತ್ತ’ ಸಂಸ್ಕೃತ ಪದ; ಇದರ ಅರ್ಥ ಮತ್ತೇರಿದ, ಹುಚ್ಚು ಹಿಡಿದ, ವಿವೇಕ ಕಳೆದುಕೊಂಡ.
  2. ಕವನದಲ್ಲಿ ಕುಡಿತ, ಕುಣಿತದಲ್ಲಿ ಮೈಮರೆತು ಬುದ್ಧಿ ತಪ್ಪಿದವರನ್ನು ‘ಉನ್ಮತ್ತರಾದ’ ಎಂದಿದೆ.
  3. ಆಯ್ಕೆಗಳಲ್ಲಿ ಈ ಅರ್ಥಕ್ಕೆ ಹತ್ತಿರವಾದುದು ‘ಬುದ್ಧಿ ಭ್ರಮಣೆ’.

ಎಚ್ಚರಿಕೆ: ಕುಡಿತ, ಕುಣಿತದ ಉದ್ರೇಕದ ಸಂದರ್ಭಕ್ಕೆ ಹೊಂದುವುದರಿಂದ (2) ‘ಆವೇಶ’ ಅನ್ನೂ ಸಮರ್ಥಿಸಬಹುದು; ಆದರೆ ಆವೇಶ ಉದ್ರೇಕವನ್ನು ಮಾತ್ರ ಸೂಚಿಸುತ್ತದೆ, ವಿವೇಕ ಕಳೆದುಕೊಳ್ಳುವುದನ್ನಲ್ಲ.