By signing in you confirm you are 18 or older, or have your parent’s or guardian’s consent.

CTET 8 Feb 2026 Paper 1 Kannada, Question 102

Topic: Poem comprehension

Passage

ನಿರ್ದೇಶನ : ಈ ಕೆಳಗಿನ ಕವನವನ್ನು ಓದಿ, ಅನುಸರಿಸಿ ಬರುವ ಪ್ರಶ್ನೆಗಳಿಗೆ (ಪ್ರಶ್ನೆ ಸಂಖ್ಯೆ : 100-105) ಸೂಕ್ತ ಉತ್ತರವನ್ನು ಆರಿಸುವುದರ ಮೂಲಕ ಉತ್ತರಿಸಿ.
ನಿಮ್ಮೊಡನಿದ್ದೂ ನಿಮ್ಮಂತಾಗದೆ ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ, ಈ ನೆಲದಲ್ಲಿ ಬೇರೊತ್ತಿದರೂ ಬೀಗಿ
ಪರಕೀಯನಾಗಿ ತಲೆಯೆತ್ತುವುದಿದೆ ನೋಡಿ
ಅದು ಬಲುಕಷ್ಟದ ಕೆಲಸ.
ವೃತ್ತದಲ್ಲಿ ಉನ್ಮತ್ತರಾದ
ನಿಮ್ಮ ಕುಡಿತ ಕುಣಿತ ಕೂಟಗಳು ಕೆಣಕಿ
ಕುಣಿಕೆ ಎಸೆದಿದ್ದರೂ
ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ :
ಸಂಯಮವನ್ನೇ ಪೋಷಿಸಿ ಸಾಕುತ್ತ
ರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.

Q102

‘ನೆಲದಲ್ಲಿ ಬೇರೂರು’ – ಈ ವಾಕ್ಯಾಂಶದ ಅರ್ಥ :

  1. (1) ಹುಟ್ಟಿದ ನೆಲದಲ್ಲಿ ನೆಲಸು
  2. (2) ಮಣ್ಣಿಗೆ ಅಂಟಿಕೊಳ್ಳುವುದು
  3. (3) ಈ ಭೂಮಿಯ ಬದುಕೇ ಮುಖ್ಯವೆಂದು ತಿಳಿಯುವುದುCorrect answer
  4. (4) ಒಬ್ಬರಿಗೆ ಭಾರವಾಗು

Solution.

CBSE answer: (3)

ಉತ್ತರ: (3) ಈ ಭೂಮಿಯ ಬದುಕೇ ಮುಖ್ಯವೆಂದು ತಿಳಿಯುವುದು

  1. ಕವನದಲ್ಲಿ ‘ಈ ನೆಲದಲ್ಲಿ ಬೇರೊತ್ತಿದರೂ’ ಎಂಬ ಸಾಲು ಬರುತ್ತದೆ.
  2. ಇಲ್ಲಿ ‘ನೆಲ’ ಎಂದರೆ ಕುಡಿತ, ಕುಣಿತ, ಕೂಟಗಳು ತುಂಬಿದ ಈ ಲೋಕದ ಬದುಕು.
  3. ಆ ಬದುಕಿನಲ್ಲೇ ಬೇರು ಬಿಟ್ಟು, ಅದನ್ನೇ ತನ್ನದೆಂದು ಒಪ್ಪಿದರೂ ಕವಿ ಅದರಲ್ಲಿ ಮುಳುಗದೆ ಪರಕೀಯನಂತೆ ತಲೆಯೆತ್ತುತ್ತಾನೆ.
  4. ಹೀಗೆ ಸಂದರ್ಭದಲ್ಲಿ ‘ಬೇರೂರು’ ಎಂದರೆ ಈ ಭೂಮಿಯ ಬದುಕಿಗೆ ಅಂಟಿ, ಅದನ್ನೇ ಮುಖ್ಯವೆಂದು ತಿಳಿಯುವುದು.

ಎಚ್ಚರಿಕೆ: ‘ಬೇರೂರು’ ನುಡಿಗಟ್ಟಿನ ನೇರ ಅರ್ಥ ‘ನೆಲೆಗೊಳ್ಳು’ ಆದ್ದರಿಂದ (1) ‘ಹುಟ್ಟಿದ ನೆಲದಲ್ಲಿ ನೆಲಸು’ ಅನ್ನೂ ಸಮರ್ಥಿಸಬಹುದು; ಆದರೆ ಕವನ ‘ಹುಟ್ಟಿದ ನೆಲ’ವನ್ನು ಹೇಳುವುದಿಲ್ಲ, ಅಲ್ಲಿ ‘ನೆಲ’ ಈ ಲೋಕದ ಬದುಕನ್ನು ಸೂಚಿಸುತ್ತದೆ.