By signing in you confirm you are 18 or older, or have your parent’s or guardian’s consent.

CTET 8 Feb 2026 Paper 1 Kannada, Question 101

Topic: Poem comprehension

Passage

ನಿರ್ದೇಶನ : ಈ ಕೆಳಗಿನ ಕವನವನ್ನು ಓದಿ, ಅನುಸರಿಸಿ ಬರುವ ಪ್ರಶ್ನೆಗಳಿಗೆ (ಪ್ರಶ್ನೆ ಸಂಖ್ಯೆ : 100-105) ಸೂಕ್ತ ಉತ್ತರವನ್ನು ಆರಿಸುವುದರ ಮೂಲಕ ಉತ್ತರಿಸಿ.
ನಿಮ್ಮೊಡನಿದ್ದೂ ನಿಮ್ಮಂತಾಗದೆ ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ, ಈ ನೆಲದಲ್ಲಿ ಬೇರೊತ್ತಿದರೂ ಬೀಗಿ
ಪರಕೀಯನಾಗಿ ತಲೆಯೆತ್ತುವುದಿದೆ ನೋಡಿ
ಅದು ಬಲುಕಷ್ಟದ ಕೆಲಸ.
ವೃತ್ತದಲ್ಲಿ ಉನ್ಮತ್ತರಾದ
ನಿಮ್ಮ ಕುಡಿತ ಕುಣಿತ ಕೂಟಗಳು ಕೆಣಕಿ
ಕುಣಿಕೆ ಎಸೆದಿದ್ದರೂ
ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ :
ಸಂಯಮವನ್ನೇ ಪೋಷಿಸಿ ಸಾಕುತ್ತ
ರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.

Q101

ಎರಡನೆಯ ಕಷ್ಟದ ಕೆಲಸ ಯಾವುದು ?

  1. (1) ಪಂಚೇಂದ್ರಿಯಕ್ಕೆ ಲಗಾಮು ಹಾಕಿ ಜಾರುವುದು
  2. (2) ಇಂದ್ರಿಯಗಳನ್ನು ಹತೋಟಿಯಲ್ಲಿಡುತ್ತ ಸಂಯಮ ತೋರುವುದುCorrect answer
  3. (3) ಪಂಚೇಂದ್ರಿಯಗಳು ಹತೋಟಿಗೆ ಬಾರದೆ ಒದ್ದಾಡುವುದು
  4. (4) ಹಗ್ಗದ ಮೇಲೆ ಡೊಂಬರಾಟ ನಡೆಸುವುದು

Solution.

CBSE answer: (2)

ಉತ್ತರ: (2) ಇಂದ್ರಿಯಗಳನ್ನು ಹತೋಟಿಯಲ್ಲಿಡುತ್ತ ಸಂಯಮ ತೋರುವುದು

  1. ಎರಡನೆಯ ಭಾಗದಲ್ಲಿ ಕುಡಿತ, ಕುಣಿತದ ಕೂಟಗಳು ಸೆಳೆದರೂ ‘ಪಂಚೇಂದ್ರಿಯಕ್ಕೆ ಲಗಾಮು ಜಡಿದು’ ‘ಸಂಯಮವನ್ನೇ ಪೋಷಿಸಿ’ ಬದುಕುವುದು ಕಷ್ಟ ಎಂದಿದೆ.
  2. ‘ರೇಖೆಯಲ್ಲೇ ದೊಂಬರಾಟ’ ಎಂಬುದು ಈ ಸಂಯಮದ ಬದುಕಿಗೆ ಕೊಟ್ಟ ಹೋಲಿಕೆ ಮಾತ್ರ.

ಎಚ್ಚರಿಕೆ: (4) ಹೋಲಿಕೆಯನ್ನು ಅಕ್ಷರಶಃ ತೆಗೆದುಕೊಳ್ಳುತ್ತದೆ; (1) ‘ಜಾರುವುದು’ ಎಂದು ಕವನಕ್ಕೆ ವಿರುದ್ಧ ಹೇಳುತ್ತದೆ.