Q100
ಮೊದಲನೆಯ ಕಡುಕಷ್ಟದ ಕೆಲಸ ಯಾವುದು ?
- (1) ಒಂಟಿಯಾಗಿ ಇರುವುದು
- (2) ಪರಕೀಯನಾಗುವುದು
- (3) ನಿಮ್ಮೊಡನೆ ಇದ್ದೂ ಇಲ್ಲದಂತೆ ಇರುವುದು
- (4) ನನ್ನತನವಿದ್ದೂ ಪರಕೀಯನಂತೆ ಆಗುವುದು
ನಿರ್ದೇಶನ : ಈ ಕೆಳಗಿನ ಕವನವನ್ನು ಓದಿ, ಅನುಸರಿಸಿ ಬರುವ ಪ್ರಶ್ನೆಗಳಿಗೆ (ಪ್ರಶ್ನೆ ಸಂಖ್ಯೆ : 100-105) ಸೂಕ್ತ ಉತ್ತರವನ್ನು ಆರಿಸುವುದರ ಮೂಲಕ ಉತ್ತರಿಸಿ.
ನಿಮ್ಮೊಡನಿದ್ದೂ ನಿಮ್ಮಂತಾಗದೆ ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ, ಈ ನೆಲದಲ್ಲಿ ಬೇರೊತ್ತಿದರೂ ಬೀಗಿ
ಪರಕೀಯನಾಗಿ ತಲೆಯೆತ್ತುವುದಿದೆ ನೋಡಿ
ಅದು ಬಲುಕಷ್ಟದ ಕೆಲಸ.
ವೃತ್ತದಲ್ಲಿ ಉನ್ಮತ್ತರಾದ
ನಿಮ್ಮ ಕುಡಿತ ಕುಣಿತ ಕೂಟಗಳು ಕೆಣಕಿ
ಕುಣಿಕೆ ಎಸೆದಿದ್ದರೂ
ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ :
ಸಂಯಮವನ್ನೇ ಪೋಷಿಸಿ ಸಾಕುತ್ತ
ರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.
ಮೊದಲನೆಯ ಕಡುಕಷ್ಟದ ಕೆಲಸ ಯಾವುದು ?
CBSE answer: (4)
ಉತ್ತರ: (4) ನನ್ನತನವಿದ್ದೂ ಪರಕೀಯನಂತೆ ಆಗುವುದು
ಎಚ್ಚರಿಕೆ: (3) ‘ಇದ್ದೂ ಇಲ್ಲದಂತೆ’ ಎನ್ನುತ್ತದೆ; ಕವಿ ಹೇಳುವುದು ಇಲ್ಲದಂತಿರುವುದಲ್ಲ, ಬೇರೆಯಾಗಿ ತಲೆಯೆತ್ತಿ ನಿಲ್ಲುವುದು. (2) ‘ನಾನು ನಾನೇ ಆಗಿ’ ಎಂಬ ಮುಖ್ಯ ಅಂಶ ಬಿಡುತ್ತದೆ.