By signing in you confirm you are 18 or older, or have your parent’s or guardian’s consent.

CTET 8 Feb 2026 Paper 1 Kannada, Question 124

Topic: Vocabulary

Passage

ನಿರ್ದೇಶನ : ಈ ಕೆಳಗಿನ ಲೇಖನ ಭಾಗವನ್ನು ಓದಿ, ಅನುಸರಿಸಿ ಬರುವ ಪ್ರಶ್ನೆಗಳಿಗೆ (ಪ್ರಶ್ನೆ ಸಂಖ್ಯೆ : 121-128) ಸೂಕ್ತ ಉತ್ತರವನ್ನು ಆರಿಸುವುದರ ಮೂಲಕ ಉತ್ತರಿಸಿ.
ಗ್ರೀಕ್ ಭಾಷೆಯಲ್ಲಿ ಮುಥೋಸ್ ಎನ್ನುವ ಪದವು ಚಾಲ್ತಿಯಲ್ಲಿ ಇದೆ. ಅದನ್ನು ಪುರಾಣಗಳಿಗೆ ಅನ್ವಯ ಮಾಡುತ್ತಾರೆ. ಮಿಥಾಲಜಿ ಎನ್ನುವುದನ್ನೇ ಮುಥೋಸ್ ಎಂದು ಕರೆಯುತ್ತಾರೆ. ಇದು ವಸ್ತುನಿಷ್ಟ ಸತ್ಯವನ್ನು ಹೇಳುವುದಿಲ್ಲ. ಸಮಾಜ ಮತ್ತು ಅದರ ಉಗಮವನ್ನು ಪುರಾಣದಲ್ಲಿ ಹುಡುಕುವ ಯತ್ನವನ್ನು ಇದು ಮಾಡುತ್ತದೆ. ಇದು ಸತ್ಯ ಕಥೆಯನ್ನು ಹೇಳದೆ ಇರುವುದರಿಂದ ಇದರ ಬಗ್ಗೆ ಕೆಲವು ವಾಗ್ವಾದಗಳೂ ಇವೆ. ಮಿಥೋಸ್ ಎಂದರೆ ಕಥನ ಮತ್ತು ವರದಿ ಎನ್ನುವ ಅರ್ಥವೂ ಇದೆ. ಕತೆಯನ್ನು ಹೇಳು ಎನ್ನುವುದು ಇದರ ಭಾವಾರ್ಥವಾಗಿದೆ. ಹಾಗೆಯೇ ಭಾಷಣ ಮತ್ತು ನಿರೂಪಣೆ ಎನ್ನುವುದನ್ನು ಇದು ಸೂಚಿಸುತ್ತದೆ. ಇದು ಒಂದು ಸಂಸ್ಕೃತಿಯ ನಂಬಿಕೆಯನ್ನು ಹೇಳುತ್ತದೆ. ಇದರಲ್ಲಿ ಅನೇಕ ಘಟನೆಗಳು ಇರುತ್ತವೆ. ಅದರಲ್ಲಿ ಭಿನ್ನತೆಗಳು ಇಲ್ಲ. ಯಾವುದನ್ನು ನಾವು ಕಥನ ಎಂದು ಹೇಳುತ್ತೇವೆಯೋ ಅದರಲ್ಲಿ ವಿವಿಧ ಘಟನೆಗಳು ಇರುತ್ತವೆ. ಅದಕ್ಕೆ ನಿಯಮಗಳು ಇರುತ್ತವೆ. ಆ ನಿಯಮವು ಸಾಹಿತ್ಯ ಮತ್ತು ಅದರ ಅಭಿವ್ಯಕ್ತಿಗೆ ಸಂಬಂಧಪಟ್ಟದ್ದೂ ಹೌದು. ಷಟ್ಪದಿ ಮತ್ತು ಚಂಪೂ ಕಾವ್ಯಗಳಲ್ಲಿ ಸಾಹಿತ್ಯ ಕಥನಗಳು ಇದ್ದವು. ಅವುಗಳಿಗೆ ಒಂದು ರೂಪವೂ ಇತ್ತು. ಅಪೂರ್ಣವಾದ ಕಥನ ಎನ್ನುವುದು ಇರಲಿಲ್ಲ. ಈಗಲೂ ನಾವು ಕತೆಯನ್ನು ಹೇಳುತ್ತೇವೆ. ಅದು ಅಪೂರ್ಣವಾಗಿದೆ ಎಂದು ಹೇಳಲಾಗುವುದಿಲ್ಲ. ಸಾಹಿತ್ಯ ಎಂದರೆ ಏನದು ಎನ್ನುವ ಪ್ರಶ್ನೆಯನ್ನು ಕೇಳಿದರೆ ಈವತ್ತು ಕೂಡಾ ನಾವು ಹಿಂದೆ ಏನು ಹೇಳಿದರೋ ಅದನ್ನೇ ಹೇಳುತ್ತೇವೆ. ವ್ಯಾಖ್ಯೆಗಳು ಹೆಚ್ಚು ಬದಲಾಗಿಲ್ಲ. ಸಾಹಿತ್ಯ ಪ್ರಕಾರಗಳು, ಸಾಹಿತ್ಯದ ರೂಪದ ಪ್ರಶ್ನೆಗಳಿಗೆ ನಾವು ಹಿಂದೆ ಏನು ಹೇಳಿದರೋ ಅದನ್ನೇ ಪ್ರತಿಪಾದಿಸುತ್ತೇವೆ. ಸ್ವಲ್ಪ ಬದಲಾವಣೆಯನ್ನು ಮಾಡಿದ್ದೇವೆ ಅಷ್ಟೇ. ಕೆಲವು ಸಾಹಿತ್ಯದ ರೂಪಗಳಿಗೆ ಹೆಚ್ಚು ಮನ್ನಣೆಯು ದೊರೆತಿದೆ. ಅದರಲ್ಲಿಯೂ ಈವತ್ತು ಕಾದಂಬರಿ ಪ್ರಕಾರವು ಹೆಚ್ಚು ಜನಪ್ರಿಯವಾಗಿದೆ. ಅದು ಆಧುನಿಕ ಕಾಲದ ಸೃಷ್ಟಿಯೂ ಹೌದು. ಹೊಸದಾದ ಸಾಮಾಜಿಕ ಸನ್ನಿವೇಶಕ್ಕೆ ಅನುಸಾರವಾಗಿ ಅದು ಇದೆ. ಅದರಲ್ಲಿ ನಾವು ನಮ್ಮ ಅನುಭವವನ್ನು ಹೇಳಬಹುದು. ಅದರ ಜೊತೆಗೆ ಅದರಲ್ಲಿ ನಮ್ಮ ಅಭಿವ್ಯಕ್ತಿಯನ್ನು ಸಾಧಿಸಬಹುದು. ಉಳಿದ ಪ್ರಕಾರಕ್ಕಿಂತ ಇದು ಭಿನ್ನವಾಗಿದೆ. ಕಾದಂಬರಿಯ ಸಂಯೋಜನೆಯು ಬೇರೆಯಾಗಿದೆ. ಕಾದಂಬರಿ ಮತ್ತು ಅದರ ಉದ್ದೇಶವೂ ಬೇರೆಯಾಗುತ್ತದೆ. ಬದಲಾಗುತ್ತಿರುವ ಸಮಾಜವನ್ನು ಹೇಳುವುದು ಭಿನ್ನವಾಗಿ ಸಮಾಜವು ಪಲ್ಲಟವಾಗುತ್ತಿದೆ ಎಂದು ಹೇಳಲು ಸಾಧ್ಯವಾಗುವುದು ಕೂಡಾ ಕಾದಂಬರಿಯಲ್ಲಿ, ಅದನ್ನು ನಾವು ಮುಸ್ಸಂಜೆಯ ಕಥಾ ಪ್ರಸಂಗದಲ್ಲಿ ಕಾಣುತ್ತೇವೆ. ಅದರಲ್ಲಿ ಮಹಾಕಾವ್ಯದ ಗುಣವಿದೆ., ಅದರಲ್ಲಿ ನಾಟಕದ ಅಂಶವೂ ಇದೆ. ಅದರಲ್ಲಿ ಅಭಿಜಾತ ಪರಂಪರೆಯು ಗುಣವೂ ಇದೆ. ಮುಸ್ಸಂಜೆಯ ಕಥಾ ಪ್ರಸಂಗದಲ್ಲಿ ನಾವು ಇದನ್ನು ಕಾಣುತ್ತೇವೆ. ಅರಿಸ್ಟಾಟಲನ ಪೊಯೆಟಿಕ್ಸ್ ಕೃತಿಯಲ್ಲಿ ಒಂದು ವಿಚಾರವು ಬರುತ್ತದೆ. ಅದು ಕ್ರಿಯೆ ಮತ್ತು ಅದರ ಐಕ್ಯತೆಯನ್ನು ಹೇಳುತ್ತದೆ. ನಿರೂಪಣೆಯ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ್ದು. ಯಾವುದನ್ನು ನಾವು ಚಾರಿತ್ರಿಕವಾದ ಮಹಾಕಾವ್ಯ ಎಂದು ಹೇಳುತ್ತೇವೆಯೋ ಅದರಲ್ಲಿ ಕ್ರಿಯೆ, ಕಾಲ ಮತ್ತು ವಸ್ತುವಿನ ಏಕತೆಯನ್ನು ನಾವು ಕಾಣುತ್ತೇವೆ. ಅವುಗಳಲ್ಲಿ ಕಾಲವು ಅತ್ಯಂತ ವಿಸ್ತಾರವಾಗಿರುತ್ತದೆ. ಕೃತಿಯ ಒಳಗಿನ ಕಾಲ ಮತ್ತು ಅದರ ನಿರೂಪಣೆಗೆ ಒಂದು ಸಂಬಂಧವು ಇದೆ.
ಚರಿತ್ರೆಯಲ್ಲಿ ನಾವು ಕೆಲವು ಪ್ರಾಚೀನ ಮಾದರಿಗಳನ್ನು ಕಾಣಬಹುದು. ಇದನ್ನು ಪ್ರೈ ಎನ್ನುವ ಚಿಂತಕ ಪ್ರಾಗ್ರೂಪ ಎಂದು ಕರೆಯುತ್ತಾನೆ. ವಿಶ್ವದ ಸಂಗತಿಗಳು ಎಲ್ಲಾ ಕಡೆಗೆ ಒಂದೇ ರೀತಿಯಲ್ಲಿ ಇರುತ್ತದೆ. ಯಾವುದನ್ನು ಅವನು ನಿಯಮ ಬದ್ಧವಾದ ರೂಪಗಳು ಎಂದು ಹೇಳುತ್ತಾನೆಯೋ ಅದರಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳು ಇರುತ್ತವೆ. ಜಗತ್ತಿನಲ್ಲಿ ಕೆಲವು ವಿಚಾರಗಳ ನಿರೂಪಣೆಯು ಒಂದೇ ರೀತಿಯಲ್ಲಿ ಇರುತ್ತವೆ. ಕಥನವನ್ನು ನಾವು ಒಂದೇ ಚಹರೆಯಲ್ಲಿ ಗುರುತಿಸುತ್ತೇವೆ. ಅದೇ ರೀತಿಯಲ್ಲಿ ಹಾಡುಗಳು ಕೂಡ ಒಂದು ಮಾದರಿಯಲ್ಲಿ ಇರುತ್ತದೆ. ನಾಟಕವು ದೃಶ್ಯಾತ್ಮಕವಾದ ಕಲೆಯು ಆಗಿದ್ದು, ಅದರಲ್ಲಿ ಹೆಚ್ಚು ಭಿನ್ನತೆಗಳಿರುವುದು ಸಾಧ್ಯವಿಲ್ಲ. ಇದಕ್ಕೆ ಕಾರಣವೂ ಸ್ಪಷ್ಟ. ಚರಿತ್ರೆಯು ಇದನ್ನು ಹೇಳುತ್ತದೆ. ಕಥನಗಳು ಮತ್ತು ಕಾದಂಬರಿಗಳು ಹಾಗೂ ಅವುಗಳ ಬೇರೆ ಬೇರೆ ಮಾದರಿಗಳು ಒಂದೇ ಮೂಲದಿಂದ ಬಂದಿರುತ್ತವೆ.

Q124

‘ಅಭಿಜಾತ’–ಈ ಪದದ ಮೂಲ ಯಾವುದು ?

  1. (1) ಹಿಂದಿ
  2. (2) ಪರ್ಶಿಯನ್
  3. (3) ಕನ್ನಡ
  4. (4) ಸಂಸ್ಕೃತCorrect answer

Solution.

CBSE answer: (4)

ಉತ್ತರ: (4) ಸಂಸ್ಕೃತ

  1. ‘ಅಭಿಜಾತ’ ಎಂಬುದು ‘ಅಭಿ’ ಉಪಸರ್ಗ ಮತ್ತು ‘ಜಾತ’ (ಹುಟ್ಟಿದ) ಸೇರಿದ ಸಂಸ್ಕೃತ ಪದ.
  2. ಇದರ ಅರ್ಥ ಶ್ರೇಷ್ಠ ಕುಲದಲ್ಲಿ ಹುಟ್ಟಿದ, ಉತ್ತಮ ಪರಂಪರೆಯ; ಇಂದು ‘ಶಾಸ್ತ್ರೀಯ’ ಎಂಬ ಅರ್ಥದಲ್ಲೂ ಬಳಕೆಯಲ್ಲಿದೆ.
  3. ಕನ್ನಡದಲ್ಲಿ ಇದು ತತ್ಸಮವಾಗಿ ಹಾಗೆಯೇ ಬಳಕೆಯಾಗುತ್ತದೆ.

ಎಚ್ಚರಿಕೆ: ಕನ್ನಡದಲ್ಲಿ ಹೆಚ್ಚು ಕೇಳಿಬರುತ್ತದೆ ಎಂದು ಮೂಲವನ್ನು ಕನ್ನಡ ಎನ್ನಬಾರದು.